alex Certify ಕುಟುಂಬದ ಪುನರ್ಮಿಲನಕ್ಕೆ ಕಾರಣವಾಯ್ತು ಪೊಲೀಸರ ಟಿಕ್ ಟಾಕ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬದ ಪುನರ್ಮಿಲನಕ್ಕೆ ಕಾರಣವಾಯ್ತು ಪೊಲೀಸರ ಟಿಕ್ ಟಾಕ್ ವಿಡಿಯೋ

ಸಾಮಾಜಿಕ ಜಾಲತಾಣ ಎಷ್ಟು ಶಾಪವೋ ಉಪಯೋಗಕಾರಿಯೂ ಹೌದು ಎಂಬುದಕ್ಕೆ ಆಗಿಂದಾಗ್ಗೆ ಉದಾಹರಣೆಗಳು ಸಿಗುತ್ತವೆ.

ಪಂಜಾಬ್ ಪೊಲೀಸರು ಮಾಡಿದ್ದ ಒಂದು ಟಿಕ್ ಟಾಕ್ ವಿಡಿಯೋ ತೆಲಂಗಾಣದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯು ತನ್ನ ಕುಟುಂಬದೊಂದಿಗೆ ಒಂದಾಗಿಸಲು ಸಾಧ್ಯವಾಗಿದೆ.

ಪೊಲೀಸ್ ಕಾನ್ಸ್ಟೆಬಲ್ ಅಜೈಬ್ ಸಿಂಗ್ ಎಂಬುವರು ವೆಂಕಟೇಶ್ವರಲು ಅವರೊಂದಿಗೆ ಸಂವಾದ ಮಾಡಿದ್ದ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಕಿವಿ ಮತ್ತು ಮಾತಿನ ತೊಂದರೆಯನ್ನು ಎದುರಿಸುತ್ತಿದ್ದ ವೆಂಕಟೇಶ್ವರಲು ಅವರಿಗೆ ಸಮಾಜ ನೆರವಾಗಬೇಕೆಂಬುದು ಪೊಲೀಸ್ ಕಾನ್ಸ್ಟೆಬಲ್ ಉದ್ದೇಶವಾಗಿತ್ತು. ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ವೆಂಕಟೇಶ್ವರಲು ಕುಟುಂಬದ ಗಮನಕ್ಕೆ ಬಂದಿದೆ.

2018ರಲ್ಲಿ ವೆಂಕಟೇಶ್ವರಲು ಟ್ರಕ್ ಒಂದರಲ್ಲಿ ನಿದ್ರೆಗೆ ಜಾರಿ ಅಪರಿಚಿತ ಸ್ಥಳದಲ್ಲಿ ಇಳಿಸಲ್ಪಟ್ಟು, ಕುಟುಂಬದಿಂದ ಬೇರ್ಪಟ್ಟಿದ್ದರಂತೆ. ವಿಡಿಯೋ ನೋಡಿದ ಬಳಿಕ ತಕ್ಷಣವೇ ಪಂಜಾಬ್ ಪೊಲೀಸರನ್ನು ಸಂಪರ್ಕಿಸಿದ ಕುಟುಂಬಕ್ಕೆ, ಆತನನ್ನು ಪತ್ತೆ ಮಾಡಲು ಸಾಧ್ಯವಾಗಿದೆ.

ಲಾಕ್ಡೌನ್ ಸಂದರ್ಭದಲ್ಲಿ ಲುಧಿಯಾನ ಫ್ಲೈಓವರ್ ಕೆಳಭಾಗದಲ್ಲಿದ್ದ ವೆಂಕಟೇಶ್ವರಲುಗೆ ಪೊಲೀಸ್ ಸಿಬ್ಬಂದಿ ಆಹಾರ ನೀಡುತ್ತಿದ್ದರಂತೆ. ಇದೀಗ ಕುಟುಂಬದ ಪುನರ್ಮಿಲನಕ್ಕೆ ಟಿಕ್ ಟಾಕ್ ವಿಡಿಯೋ ಅನುಕೂಲವಾಗಿದ್ದು ಒಂದು ಕಡೆಯಾದರೆ, ಸ್ಥಳೀಯರು ಪೊಲೀಸ್ ಸಿಬ್ಬಂದಿಯನ್ನು ಹಾಡಿಹೊಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...