alex Certify ನೂತನ ಕೃಷಿ ಕಾಯ್ದೆ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂತನ ಕೃಷಿ ಕಾಯ್ದೆ ಕುರಿತು ನಿಮಗೆಷ್ಟು ಗೊತ್ತು…? ಇಲ್ಲಿದೆ ಸಂಪೂರ್ಣ ಮಾಹಿತಿ

ನಮ್ಮ ಸಂವಿಧಾನದ ಅನುಚ್ಛೇದ 19 ರಿಂದ ಹಿಡಿದು 22ರವರೆಗೂ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದೇ ಆಗಿದೆ. ಇದರಲ್ಲಿ ದೇಶದ ಪ್ರತಿ ವರ್ಗದ ಜನರ ಸೌಖ್ಯವನ್ನ ಗಮನದಲ್ಲಿ ಇಟ್ಕೊಂಡು ಈ ಅನುಚ್ಛೇದಗಳನ್ನ ರೂಪಿಸಲಾಗಿದೆ. ಇದರಲ್ಲಿ ಅನುಚ್ಛೇದ 19 ಅತ್ಯಂತ ಮಹತ್ವ ಪೂರ್ಣದ್ದಾಗಿದೆ.

ಇದರನ್ವಯ ದೇಶದ ಜನತೆಗೆ 6 ಬಗೆಯ ಸ್ವಾತಂತ್ರ್ಯ ನೀಡಲಾಗಿದೆ. ವಿಚಾರ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಮ್ಮೇಳನ ನಡೆಸುವ ಸ್ವಾತಂತ್ರ್ಯ, ಸಮುದಾಯ ಹಾಗೂ ಸಂಘಗಳನ್ನ ನಿರ್ಮಾಣ ಮಾಡಬಲ್ಲ ಸ್ವಾತಂತ್ರ್ಯ, ನಿವಾಸದ ಸ್ವಾತಂತ್ರ್ಯತೆ ಹಾಗೂ ಕೃಷಿ ಸ್ವಾತಂತ್ರ್ಯ. ಅಂದರೆ ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಯ ಸ್ವಾತಂತ್ಯದ ಬಗ್ಗೆ ಗಮನ ಹರಿಸಲಾಗಿದೆ.

ಆದರೆ 70 ವರ್ಷಗಳ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೊಸ ಕೃಷಿ ಕಾನೂನನ್ನ ಮಂಜೂರು ಮಾಡಿ 60 ಕೋಟಿ ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಆದರೆ ಈ ಸ್ವಾತಂತ್ರ್ಯವನ್ನ ಕೆಲವೊಬ್ಬರಿಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅಂದರೆ ಯಾವೆಲ್ಲ ಸ್ವಾತಂತ್ರ್ಯದಿಂದ ಕೃಷಿಕ ವಂಚಿತನಾಗಿದ್ದನೋ, ಆ ಎಲ್ಲಾ ಸ್ವಾತಂತ್ರ್ಯಗಳನ್ನ ಈಗ ನೀಡಲಾಗಿದೆಯಾದರೂ ಅದು ಕೆಲ ರೈತರಿಗೆ ಬೇಡವಾಗಿದೆ. ದೇಶ ಹಾಗೂ ವಿದೇಶಗಳಲ್ಲಿ ಕೃಷಿ ಕಾನೂನಿನ ಮೂಲಕ ನೀಡಲಾದ ಸ್ವಾತಂತ್ರ್ಯಕ್ಕೆ ವಿರೋಧ ವ್ಯಕ್ತವಾಗ್ತಿದೆ.

ದೇಶದಲ್ಲಿ ರೈತರ ಸ್ಥಿತಿ ಶೋಚನೀಯವಾಗಿದೆ. ಇಡೀ ಕುಟುಂಬವೇ ದುಡಿದರೂ ಕೂಡ ಅದಷ್ಟೋ ಕೃಷಿ ಆಧಾರಿತ ಕುಟುಂಬಕ್ಕೆ ಒಂದೊತ್ತು ಊಟಕ್ಕೂ ಗತಿ ಇಲ್ಲದ ಸ್ಥಿತಿ ಇದೆ. ಅಮೆರಿಕದಲ್ಲಿ ಒಂದು ಸಾಮಾನ್ಯ ಕುಟುಂಬ ಪ್ರತಿ ತಿಂಗಳು 3.79 ಲಕ್ಷ ರೂಪಾಯಿ ಸಂಪಾದಿಸುತ್ತೆ ಅಂದ್ರೆ ಅದೇ ಕೃಷಿಕ ಕುಟುಂಬ ತಿಂಗಳಿಗೆ 4.35 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತೆ.

ಅಂದರೆ ಅಮೆರಿಕದಲ್ಲಿ ರೈತ ಕುಟುಂಬ ಸಾಮಾನ್ಯ ಕುಟುಂಬಕ್ಕಿಂತ 15 ಪ್ರತಿಶತ ಜಾಸ್ತಿ ಸಂಪಾದನೆ ಮಾಡುತ್ತೆ. ಆದರೆ ಭಾರತದಲ್ಲಿ ಸಾಮಾನ್ಯ ಕುಟುಂಬಕ್ಕಿಂತ ಕೃಷಿ ಆಧಾರಿತ ಕುಟುಂಬ 84 ಪ್ರತಿಶತ ಕಡಿಮೆ  ಆದಾಯ ಹೊಂದಿದೆ. ಸೂಜಿ ನಿರ್ಮಾಣ ಮಾಡುವ ಕಾರ್ಖಾನೆಯೇ ಆಗಲಿ ಇಲ್ಲವೇ ಹಡಗು ನಿರ್ಮಾಣ ಮಾಡುವ ಕಂಪನಿಯೇ ಆಗಿರಲಿ ಅವರಿಗೆ ತಮ್ಮ ಉತ್ಪನ್ನಗಳನ್ನ ಯಾವ ದರಕ್ಕೆ ಮಾರಾಟ ಮಾಡಬಹುದು ಎಂದು ನಿರ್ಧರಿಸುವ ಅಧಿಕಾರ ಇದೆ. ಆದರೆ ದೇಶದ ರೈತನಿಗೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ತಾನು ಬೆಳೆದ ಬೆಲೆಗೆ ದರ ನಿಗದಿ ಮಾಡುವ ಅಧಿಕಾರ ಮಾತ್ರ ಇಲ್ಲಿಯವರೆಗೂ ಸಿಕ್ಕಿರಲಿಲ್ಲ.

ನಮ್ಮ ದೇಶದ ಸಂವಿಧಾನದ ಅನುಚ್ಛೇದ 21ರ  ಅನುಸಾರ ನಮಗೆ ಬದುಕುವ ಅಧಿಕಾರ ಇದೆ. ಬದುಕಲು ಅಧಿಕಾರ ಇದೆ ಆದರೆ ಜೀವನೋಪಾಯವನ್ನ ಬೇಕಂದ ಹಾಗೆ ಮಾಡುವ ಅಧಿಕಾರ ಇಲ್ಲ. ಒಮ್ಮೆ ಯೋಚನೆ ಮಾಡಿ ಜೀವನೋಪಾಯಕ್ಕೆ ಯಾವುದೇ ಮಾರ್ಗವಿಲ್ಲದೇ ಯಾವ ವ್ಯಕ್ತಿ ಬದುಕಲು ಹೇಗೆ ಸಾಧ್ಯ..? ತನ್ನ ಜಮೀನಿನಲ್ಲಿ ಕಷ್ಟ ಪಟ್ಟು ಬೆಳೆ ಬೆಳೆಯುವ ರೈತನಿಗೇ ಅದರ ದರ ನಿಗದಿ ಮಾಡುವ ಅಧಿಕಾರ ಇಲ್ಲ ಅಂದ್ರೆ ಅವನಿಗೆ ಯಾವ ಸ್ವಾತಂತ್ರ್ಯ ಸಿಕ್ಕಂತೆ ಆಯ್ತು..?

ಕೃಷಿ ಮಸೂದೆಗಳನ್ನ ವಿರೋಧಿಸಿ ಈಗ ವಿದೇಶಿ ಸೆಲೆಬ್ರಿಟಿಗಳೆಲ್ಲ ದೇಶದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಬಹುಶಃ ಇವರೆಲ್ಲ ಯೂನಿವರ್ಸಲ್​ ಆಫ್​ ಹ್ಯೂಮನ್​ ರೈಟ್ಸ್​ ಆರ್ಟಿಕಲ್​ – 25ಯನ್ನು ಸರಿಯಾಗಿ ಅಧ್ಯಯನ ಮಾಡಿಲ್ಲವೆನಿಸುತ್ತೆ. ಇದರಲ್ಲಿ ಪ್ರತಿಯೊಬ್ಬನಿಗೂ ಒಳ್ಳೆಯ ಆಹಾರ, ಬಟ್ಟೆ, ಆಶ್ರಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನ ಪಡೆಯೋದ್ರ ಜೊತೆಗೆ ಸುರಕ್ಷಿತ ಉದ್ಯೋಗವನ್ನ ಪಡೆಯುವ ಅಧಿಕಾರವೂ ಇದೆ.

ಸರಿ ಸುಮಾರು 6 ದಶಕಗಳ ಬಳಿಕ ದೇಶದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವೊಂದು ಇಂತಹ ಸಾಹಸವನ್ನ ಪ್ರದರ್ಶಿಸಿದೆ. ರೈತರಿಗೆ ತಮ್ಮ ಬೆಳೆಯನ್ನ ಬೆಳೆದು ತಮ್ಮಿಷ್ಟ ಬಂದಂತೆ ಮಾರಾಟ ಮಾಡುವ ಅಧಿಕಾರವನ್ನ ನೀಡಿದೆ. ನಮ್ಮದೇ ದೇಶದ ಅನೇಕ ರೈತರು ಈ ಕಾನೂನಿನಿಂದ ನಮಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಹೀಗಾಗಿ ಕೃಷಿ ಮಸೂದೆಯನ್ನ ಹಿಂಪಡೆಯೋದು ಬೇಡ ಎಂದೇ ಹೇಳ್ತಿದ್ದಾರೆ. ಆದರೆ ಕೆಲ ಜನರು ಮಾತ್ರ ಕೃಷಿ ಮಸೂದೆಯೇ ಸರಿ ಇಲ್ಲ ಅಭಿಪ್ರಾಯ ಪಡ್ತಿದ್ದಾರೆ. ಈ ಜನರಿಗೆ ನಿಜಕ್ಕೂ ರೈತರ ಮೇಲೆ ಕಾಳಜಿ ಇದೆಯೋ ಇಲ್ಲ ದೇಶದ ವಿರುದ್ಧ ರಚಿಸಲಾದ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೋ ಅನ್ನೋದನ್ನ ಅವಲೋಕಿಸಲೇಬೇಕಿದೆ.

17 ಸೆಪ್ಟೆಂಬರ್​ 2020ರಂದು ಲೋಕಸಭೆಯಲ್ಲಿ ಮೂರು ಕೃಷಿ ಬಿಲ್​ಗಳನ್ನ ಪಾಸ್​ ಮಾಡಲಾಯ್ತು. ಅದೇ ದಿನ ದೇಶದಲ್ಲಿ ಮಸೂದೆ ಕೂಡ ಜಾರಿಯಾಯ್ತು. ಸರ್ಕಾರ ಜಾರಿ ಮಾಡಿರುವ ಈ ಕಾನೂನುಗಳ ಅಡಿಯಲ್ಲಿ ರೈತರಿಗೆ ಲಾಭವೇ ಕಾದಿದೆ ಅಂದಮೇಲೆ ಪಂಜಾಬ್​ನಿಂದ ದೆಹಲಿಯವರೆಗೆ ಈ ಪ್ರತಿಭಟನೆಗಳನ್ನ ಏಕೆ ಮಾಡಲಾಗ್ತಿದೆ..? ಅಲ್ಲದೇ ಕೃಷಿ ಮಸೂದೆಗಳನ್ನ ವಿರೋಧಿಸಿ ಹಿಂಸಾಚಾರ ನಡೆಸಲಾಯ್ತು..? ನಮ್ಮ ದೇಶದ ಗಣರಾಜ್ಯೋತ್ಸವ ದಿನದ ಮೇಲೆ ಯಾಕೆ ಕಳಂಕ ಬರುವಂತೆ ಮಾಡಲಾಯ್ತು..? ಈಗ ನಿಮಗೆ ಯಾವ ವಿಚಾರಗಳನ್ನ ಈ ಜನರು ವಿರೋಧಿಸ್ತಾ ಇದ್ದಾರೆ. ಕೃಷಿ ಮಸೂದೆಗೆ ಯಾಕೆ ಈ ಮಟ್ಟಿಗೆ ವಿರೋಧ ಇದೆ ಅನ್ನೋದರ ಬಗ್ಗೆ ಮಾಹಿತಿ ನೀಡುತ್ತೇವೆ.

ಮೊದಲ ಕಾನೂನು : ಈ ಕಾನೂನಿನ ಅಡಿಯಲ್ಲಿ ರೈತ ತನ್ನ ಬೆಳೆಗಳನ್ನ ಎಪಿಎಂಸಿಯ ಹೊರಗಡೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಸಣ್ಣ ಕೃಷಿದಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಕಾನೂನನ್ನ ರೂಪಿಸಲಾಗಿದೆ. ಯಾರಾದರೂ ರೈತನ ಬೆಳೆಯನ್ನ ಖರೀದಿ ಮಾಡಲು ಬಯಸಿದ್ರೆ ಆತ ಫಾರ್ಮ್​ ಗೇಟ್​ನಲ್ಲಿಯೇ ತನ್ನ ಉತ್ಪನ್ನಗಳನ್ನ ಮಾರಾಟ ಮಾಡಬಹುದು.

ಆದರೆ ಈ ಕಾನೂನನ್ನ ಇಟ್ಟುಕೊಂಡು ರೈತರಿಗೆ ಕೆಲವರು ಯಾವ ರೀತಿ ಭಯ ಹುಟ್ಟಿಸಿದ್ದಾರೆ ಅಂದರೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಎಪಿಎಂಸಿ ವ್ಯವಸ್ಥೆಯನ್ನೇ ಬಂದ್​ ಮಾಡಲಿದೆ ಎಂದು ತಲೆಗೆ ತುಂಬಲಾಗಿದೆ. ಆದರೆ ಕೇಂದ್ರ ಸರ್ಕಾರ ದೇಶದಲ್ಲಿ ವ್ಯಾಪಾರಿ ಮಂಡಿಗಳನ್ನ ಇನ್ನಷ್ಟು ಹೆಚ್ಚಿಸುವ ಉದ್ದೇಶವನ್ನ ಹೊಂದಿದೆ.

ಎರಡನೇ ಕಾನೂನು : ಈ ಕಾನೂನಿನಲ್ಲಿ ಸರ್ಕಾರ ಏನು ಹೇಳಿದೆ ಅಂದ್ರೆ, ರೈತ ಹಾಗೂ ಕಂಪನಿಗಳ ಮಧ್ಯೆ ಕ್ಯಾಂಟ್ಯಾಕ್ಟ್​ ಫಾರ್ಮಿಂಗ್​ ರೂಪಿಸುವುದಾಗಿದೆ. ಅಂದರೆ ಕೃಷಿಕ ತನ್ನ ಬೆಳೆಗಳ ವಿಚಾರದಲ್ಲಿ ಯಾವುದೇ ಕಂಪನಿ ಜೊತೆ ಅಗ್ರಿಮೆಂಟ್​ ಮಾಡಿಕೊಳ್ಳಬಹುದಾಗಿದೆ.

ಆದರೆ ಈ ಕಾನೂನಿಂದ ರೈತ ಆ ಕಂಪನಿಯ ಜೀತಾದಾಳಾಗ್ತಾನೆ ಎಂದು ರೈತರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಆದರೆ ಈ ಕಾನೂನಿನಲ್ಲಿ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಳ್ಳುವ ಕಂಪನಿಗಿಂತ ಜಾಸ್ತಿ ರೈತ ಪರವಾಗಿ ನಿಂತಿದೆ.

ಮೂರನೇ ಕಾನೂನು : ಇದಂತೂ ರೈತರ ಪಾಲಿಗೆ ಭಯಾನಕ ಕಾನೂನು ಎಂದೇ ತಪ್ಪು ಮಾಹಿತಿ ಪಸರಿಸಲಾಗುತ್ತಿದೆ. ಇದರಿಂದ ರೈತನಿಗೆ ಮಾತ್ರವಲ್ಲದೇ ಸಾಮಾನ್ಯ ಜನರಿಗೂ ತೊಂದರೆಯಾಗಲಿದೆ ಎಂದು ಹೇಳಲಾಗ್ತಾ ಇದೆ. ಕೃಷಿ ಕ್ಷೇತ್ರದಲ್ಲಿ ಬ್ಲಾಕ್​ ಮಾರ್ಕೆಟಿಂಗ್​ ಹೆಚ್ಚಾಗಲಿದೆ ಎಂದ ಆತಂಕವನ್ನ ಹರಡಲಾಗುತ್ತಿದೆ. ಆದರೆ ಈ ಮೂರು ಕಾನೂನಿಂದ ರೈತನಿಗಾಗಲಿ ಸಾಮಾನ್ಯ ಜನತೆಗಾಗಲಿ ಲಾಭವೇ ಇದೆ ಹೊರತು ನಷ್ಟವಂತೂ ಇಲ್ಲವೇ ಇಲ್ಲ.

ಕೆಲವರು ಸುಮ್ಮನೇ ಏನೋ ಒಂದು ವಿರೋಧ ಮಾಡಬೇಕು ಎಂಬ ಉದ್ದೇಶ ಇಟ್ಕೊಂಡು ವಿರೋಧ ಮಾಡ್ತಾರೆ. ರೈತನಿಗೆ ಏನು ಬೇಕು ಏನು ಬೇಡ ಅನ್ನೋದನ್ನ ಯಾರೋ ಮೂರನೆಯವರು ನಿರ್ಧಾರ ಮಾಡ್ತಿದ್ದಾರೆ. ಹೀಗಾಗಿಯೇ ದೇಶದಲ್ಲಿ ಇಷ್ಟೊಂದು ಗಲಭೆ, ಹಿಂಸಾಚಾರಗಳು ಭುಗಿಲೆದ್ದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...