alex Certify ಕುಗ್ರಾಮಗಳಿಂದ ಗರ್ಭಿಣಿಯರನ್ನು ಆಸ್ಪತ್ರೆಗೆ ತರಲು ಪಲ್ಲಕ್ಕಿ ವ್ಯವಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಗ್ರಾಮಗಳಿಂದ ಗರ್ಭಿಣಿಯರನ್ನು ಆಸ್ಪತ್ರೆಗೆ ತರಲು ಪಲ್ಲಕ್ಕಿ ವ್ಯವಸ್ಥೆ

ಆಸ್ಪತ್ರೆಗೆ ಹೋಗಲು ಮೈಲಿಗಟ್ಟಲೇ ನಡೆಯಬೇಕಾದ ಅನಿವಾರ್ಯತೆ ಹೊಂದಿರುವ ಗರ್ಭಿಣಿಯರ ಕಷ್ಟವನ್ನ ಅರ್ಥೈಸಿಕೊಂಡ ನೈನಿತಾಲ್​ ಜಿಲ್ಲಾಡಳಿತ ಗರ್ಭಿಣಿಯರಿಗೆಂದೇ ಪಲ್ಲಕ್ಕಿ ಸೇವೆಯನ್ನ ಪರಿಚಯಿಸಿದೆ.

ಕುಗ್ರಾಮಗಳಲ್ಲಿ ನೆಲೆಸಿರುವ ಗರ್ಭಿಣಿಯರನ್ನ ಹೆರಿಗೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆತರಲು ಪಲ್ಲಕ್ಕಿ ವ್ಯವಸ್ಥೆ ಮಾಡಿಸಿ ಎಂದು ಜಿಲ್ಲಾಧಿಕಾರಿ ಸವಿನ್​ ಬನ್ಸಾಲ್​ ಸೂಚನೆ ನೀಡಿದ್ದಾರೆ.

ಇದಕ್ಕಾಗಿ 10 ಲಕ್ಷ ರೂಪಾಯಿ ಅನುದಾನವನ್ನ ಬಿಡುಗಡೆ ಮಾಡಿರುವ ನೈನಿತಾಲ್​ ಜಿಲ್ಲಾಡಳಿತ ಜಿಲ್ಲೆಯಲ್ಲಿ 500 ಪಲ್ಲಕ್ಕಿಗಳನ್ನ ನಿರ್ಮಿಸುವಂತೆ ಮುಖ್ಯ ವೈದ್ಯಕೀಯ ಅಧಿಕಾರಿಗೆ ಸೂಚನೆ ನೀಡಿದೆ,

ವಿಶೇಷವಾಗಿ ಧಾರಿ, ರಾಮಗರ್, ಒಖಾಲ್ಕಂಡ , ಬೆಟಲ್​ ಘಾಟ್​ ಹಾಗೂ ಭೀಮ್​ತಾಲ್​ನಂತಹ ಕುಗ್ರಾಮಗಳನ್ನ ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಜಾರಿಗೆ ತರಲಾಗಿದೆ

ಅಲ್ಲದೇ ಪಲ್ಲಕ್ಕಿಯಲ್ಲಿ ಗರ್ಭಿಣಿಯರನ್ನ ಸ್ವಯಂಪ್ರೇರಿತರಾಗಿ ಹೊತ್ತು ತರುವವರಿಗೆ 2 ಸಾವಿರ ರೂಪಾಯಿ ಗೌರವ ಧನ ನೀಡಲಾಗುವುದು ಎಂದು ಬನ್ಸಾಲ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...