alex Certify ಹೆಲ್ಮೆಟ್‌ ಧರಿಸದ ಗರ್ಭಿಣಿಯನ್ನು 3 ಕಿ.ಮೀ. ನಡೆಸಿದ ಪೊಲೀಸ್‌ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲ್ಮೆಟ್‌ ಧರಿಸದ ಗರ್ಭಿಣಿಯನ್ನು 3 ಕಿ.ಮೀ. ನಡೆಸಿದ ಪೊಲೀಸ್‌ ಅಧಿಕಾರಿ

ಮಯೂರ್​ಭಂಜ್​ ಜಿಲ್ಲೆಯ ಶರತ್​ ಠಾಣೆಯಲ್ಲಿ ಪೊಲೀಸ್​ ಅಧಿಕಾರಿ ರೀನಾ ಬಕ್ಸಲ್​ ಎಂಬವರು ಮಾರ್ಚ್​ 28ರಿಂದ ಆದೇಶ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಹಾಗೂ ಪೊಲೀಸ್​ ಠಾಣೆಯ ಉಸ್ತುವಾರಿಯನ್ನ ಸಹಾಯಕ ಸಬ್​ ಇನ್​ಸ್ಪೆಕ್ಟರ್​​ ಬಿ.ಡಿ. ದಾಸ್ಮೋಹಪಾತ್ರ ಎಂಬವರಿಗೆ ಹಸ್ತಾಂತರಿಸಲಾಗಿದೆ.

ಪೊಲೀಸ್​ ಅಧಿಕಾರಿ ರೀನಾ ಬಕ್ಸಲ್​ರಿಂದ ನಮಗೆ ಹಿಂಸೆಯಾಗಿದೆ ಎಂದು ಗರ್ಭಿಣಿ ಮಹಿಳೆ ಹಾಗೂ ಆಕೆಯ ಪತಿ ಆರೋಪಿಸಿದ ನಂತರ ಈ ಕ್ರಮವನ್ನ ಕೈಗೊಳ್ಳಲಾಗಿದೆ.

ಗುರುಬಾರಿ ಎಂಬಾಕೆ ತನ್ನ ಪತಿ ವಿಕ್ರಂ ಎಂಬವರ ಜೊತೆ ಬೈಕ್​​ನಲ್ಲಿ ಉದಾಲಾ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆಂದು ತೆರಳುತ್ತಿದ್ದರು. ಈ ವೇಳೆ ವಿಕ್ರಂ ಹೆಲ್ಮೆಟ್​ ಧರಿಸಿದ್ದರೆ ಗುರುಬಾರಿ ಹೆಲ್ಮೆಟ್​ ಧರಿಸಿರಲಿಲ್ಲ.

ಆಕೆಯ ಆರೋಗ್ಯ ಸ್ಥಿತಿ ಸರಿಯಲ್ಲದ ಕಾರಣ ಆಕೆ ಹೆಲ್ಮೆಟ್​ ಧರಿಸಿರಲಿಲ್ಲ. ಆದರೆ ರೀನಾ ಬಕ್ಸಲ್​​ ಈ ಮಾತನ್ನ ಕೇಳಿರಲಿಲ್ಲ. 500 ರೂಪಾಯಿ ದಂಡ ವಿಧಿಸಿದ್ದು ಮಾತ್ರವಲ್ಲದೇ ತಮ್ಮ ಪತ್ನಿ ಮೂರು ಕಿಲೋಮೀಟರ್​ವರೆಗೆ ನಡೆದುಕೊಂಡು ಹೋಗುವಂತೆ ಮಾಡಿದ್ದಾರೆ ಎಂದು ಪತಿ ವಿಕ್ರಂ ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...