alex Certify ಹೆಗಲ ಮೇಲೆ ತುಂಬು ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ತಂದ ಕುಟುಂಬಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಗಲ ಮೇಲೆ ತುಂಬು ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ತಂದ ಕುಟುಂಬಸ್ಥರು

ಮಾನ್ಸೂನ್ ಮಾಸದ ಭಾರೀ ಪ್ರವಾಹದ ಕಾರಣದಿಂದಾಗಿ ಗರ್ಭಿಣಿ ಮಹಿಳೆಯೊಬ್ಬರನ್ನು ಅವರ ಕುಟುಂಬದ ಸದಸ್ಯರು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿ ಬಂದಿದೆ. ನಕ್ಸಲ್ ಪೀಡಿತ ಭದ್ರಾದ್ರಿ ಕೋತಗುಡೆಂ ಜಿಲ್ಲೆಯಲ್ಲಿ ಈ ಘಟನೆ ಜರುಗಿದೆ.

ಲೋನಾವತ್‌ ಮೆಹ್ತಾ ಹೆಸರಿನ ಈ ಗರ್ಭಿಣಿ ಮಹಿಳೆಯ ಪರಿಸ್ಥಿತಿ ಗಂಭೀರವಾದ ಕಾರಣ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತುರ್ತು ಪರಿಸ್ಥಿತಿ ಉದ್ಭವಿಸಿತ್ತು. ಈ ಸಮಯದಲ್ಲಿ, ಮಳೆ ಕಾರಣ ರಸ್ತೆ ಹದಗೆಟ್ಟು 108 ಆಂಬುಲೆನ್ಸ್ ಅಲ್ಲಿಗೆ ಬರುವುದು ಸಾಧ್ಯವಾಗದೇ ಇದ್ದ ವೇಳೆ, ಮಹಿಳೆಯ ಸಂಬಂಧಿಕರು ಅಲ್ಲಿಗೆ ಬಂದು ಆಕೆಯನ್ನು ಆಸ್ಪತ್ರೆಗೆ ಹೊತ್ತೊಯ್ದಿದ್ದಾರೆ.

ಈ ಪ್ರದೇಶಕ್ಕೆ ಸೂಕ್ತ ರಸ್ತೆ ಹಾಗೂ ಸೇತುವೆಯೊಂದನ್ನು ನಿರ್ಮಾಣ ಮಾಡಲು ನಾಲ್ಕು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರೂ ಸಹ ನಕ್ಸಲೈಟ್ ದಾಳಿಯ ಭೀತಿಯ ನಡುವೆ ಈ ಕೆಲಸ ಇನ್ನೂ ಬಾಕಿ ಇದೆ. ಈ ಕಾರಣದಿಂದಾಗಿ ಪ್ರದೇಶದಲ್ಲಿರುವ ಜನರಿಗೆ ಈ ರೀತಿಯ ಸವಾಲುಗಳು ಸಾಮಾನ್ಯ ಎಂಬಂತಾಗಿಬಿಟ್ಟಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...