ಪ್ರಸಾರ ಭಾರತಿ ಹಾಗೂ ಭಾಸ್ಕರಾಚಾರ್ಯ ರಾಷ್ಟ್ರೀಯ ಬಾಹ್ಯಾಕಾಶ ಹಾಗೂ ಭೂ ವಿಜ್ಞಾನ ವಿಶ್ವ ವಿದ್ಯಾಲಯ, ಎಲೆಕ್ಟ್ರಾನಿಕ್ಸ್ & ತಂತ್ರಜ್ಞಾನ ಸಚಿವಾಲಯ 51 ಶಿಕ್ಷಣ ಟಿವಿ ಚಾನೆಲ್ಗಳನ್ನ ಪ್ರಸಾರ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ. ಡಿಡಿ ಕೋ ಬ್ರ್ಯಾಂಡ್ ಚಾನೆಲ್ಗಳಾಗಿ ವೀಕ್ಷಕರಿಗೆ ಲಭ್ಯವಾಗಲಿವೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನ ಒಳಗೊಂಡು ಗುಣಮಟ್ಟದ ಶಿಕ್ಷಣವನ್ನು ನೀಡುವ ಸಲುವಾಗಿ ಈ ಶೈಕ್ಷಣಿಕ ಚಾನೆಲ್ಗಳನ್ನ ಪ್ರಸಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸೇವೆಯು ಎಲ್ಲಾ ವೀಕ್ಷಕರಿಗೆ ಉಚಿತವಾಗಿ ಲಭ್ಯವಿರಲಿದೆ .
ಟ್ವಿಟರ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಪ್ರಸಾರ ಭಾರತಿ, ಇಂದು ಭಾಸ್ಕರಾಚಾರ್ಯ ಇನ್ಸಿಟಿಟ್ಯೂಟ್, ಐಟಿ ಸಚಿವಾಲಯದ ಜೊತೆ 51 ಡಿಟಿಹೆಚ್ ಶಿಕ್ಷಣ ಟಿವಿ ಚಾನೆಲ್ಗಳ ಪ್ರಸಾರದ ಒಪ್ಪಂದಕ್ಕೆ ಸಹಿ ಹಾಕಿದೆ. ಡಿಡಿ ಸಹ ಬ್ರ್ಯಾಂಡ್ಗಳಾಗಿ ಈ ಚಾನೆಲ್ಗಳು ವೀಕ್ಷಕರಿಗೆ ಲಭ್ಯವಾಗಲಿದೆ ಅಂತಾ ಬರೆದುಕೊಂಡಿದೆ.
ಗ್ರಾಮೀಣ ಹಾಗೂ ದೂರದ ಪ್ರದೇಶಗಳ ಮನೆ ಮನೆಗೂ 24×7 ಗುಣಮಟ್ಟದ ಶಿಕ್ಷಣ ಲಭ್ಯವಿರಲಿದೆ. ಹಾಗೂ ಈ ಎಲ್ಲ ಚಾನೆಲ್ಗಳು ಉಚಿತವಾಗಿಯೇ ಪ್ರಸಾರವಾಗಲಿದೆ.