alex Certify ಪೂನಂ ಪಾಂಡೆ ಕುರಿತು ನಡೆದಿದೆ ಪರ-ವಿರೋಧದ ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂನಂ ಪಾಂಡೆ ಕುರಿತು ನಡೆದಿದೆ ಪರ-ವಿರೋಧದ ಚರ್ಚೆ

Poonam Pandey Was Detained For Shooting 'Obscene' Video in Goa, Indians are Desperately Googling For it

ಗೋವಾ ರಾಜ್ಯದ ಕಾಣಕೋಣದ ಸರ್ಕಾರಿ ಸ್ಥಳದಲ್ಲಿ ಅನುಮತಿ ಇಲ್ಲದೇ ಆಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ನಟಿ, ಮಾಡೆಲ್ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಜಾಲತಾಣದಲ್ಲಿ ಈಗ ಪೂನಂ ವಿರುದ್ಧ ಪರ-ವಿರೋದದ ಚರ್ಚೆ ನಡೆದಿದೆ.

ಅಪೂರ್ವ ಅಸ್ರಾನಿ ಸೇರಿ ಬಾಲಿವುಡ್ ನ ಕೆಲವು ಫಿಲ್ಮ್ ಮೇಕರ್ ಗಳು, ಸ್ಕ್ರಿಪ್ಟ್ ರೈಟರ್ ಗಳು ಪೂನಂ ಪಾಂಡೆ ಪರ ಟ್ವೀಟ್ ಮಾಡಿದ್ದಾರೆ. “ಎರಡು ದಿನಗಳ ಹಿಂದೆ ನಟ ಮಿಲಿಂದ್ ಸೋಮನ್ ಸಾರ್ವಜನಿಕ ಸ್ಥಳದಲ್ಲಿ ಸಂಪೂರ್ಣ ಬೆತ್ತಲಾಗಿ ಓಡಿದರು. ಜಾಲತಾಣಗಳಲ್ಲೂ ಫೋಟೋ ಹಂಚಿಕೊಂಡರು ಆದರೆ, ಅವರು ಫಿಟ್ನೆಸ್ ಸಂದೇಶ ನೀಡಿದ್ದಾರೆ ಎಂದು ಹೊಗಳಿದ ಜನ ಪೂನಂ ಪಾಂಡೆ ವಿರುದ್ಧವೇಕೆ ಮಾತನಾಡುತ್ತಿದ್ದಾರೆ..?” ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದನ್ನು “ಇಂಡಿಯನ್ ಹಿಪೊಕ್ರಸಿ” ಎಂದು ಕರೆದಿದ್ದಾರೆ.‌

ಪೂನಂ ಅರೆ ಬೆತ್ತಲಾಗಿ ಚಿತ್ರೀಕರಣ ಮಾಡಿದರು. ಆಕೆ‌ ವಿರುದ್ಧ ಜನ ಪ್ರತಿಭಟನೆ ನಡೆಸಿದ್ದಾರೆ. ಜಾಲತಾಣಗಳಲ್ಲಿ ಹರಿ ಹಾಯುತ್ತಿದ್ದಾರೆ. ಆದರೆ, ವಿಪರ್ಯಾಸ ಎಂದರೆ ಕಳೆದ ಒಂದು ದಿನದಲ್ಲಿ ಭಾರತದಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಜನ ಹುಡುಕಾಡಿದ್ದು, ಗೂಗಲ್ ಟ್ರೆಂಡಿಂಗ್ ನಲ್ಲಿದ್ದಿದ್ದು, ಗೋವಾದಲ್ಲಿ ಪೂನಂ ವಿಡಿಯೋ ಎಂದು ಹಲವು ಟ್ವಿಟ್ಟಿಗರು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...