alex Certify ಭಾರತದತ್ತ ಕಣ್ಣೆತ್ತಿ ನೋಡಿದವರಿಗೆ ವೀರಯೋಧರಿಂದ ತಕ್ಕ ಪ್ರತ್ಯುತ್ತರ: ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದತ್ತ ಕಣ್ಣೆತ್ತಿ ನೋಡಿದವರಿಗೆ ವೀರಯೋಧರಿಂದ ತಕ್ಕ ಪ್ರತ್ಯುತ್ತರ: ಮೋದಿ

ನವದೆಹಲಿ: ಅನ್ಲಾಕ್ ಸಂದರ್ಭದಲ್ಲಿ ಕೊರೋನವನ್ನು ಸೋಲಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ಮನ್ ಕಿ ಬಾತ್’ 66 ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಎದುರಾದ  ಸವಾಲುಗಳನ್ನು ಮೆಟ್ಟಿ ನಾವು ಮುನ್ನಡೆಯಬೇಕಿದೆ ಎಂದು ತಿಳಿಸಿದ್ದಾರೆ.

ಲಡಾಖ್ ನಲ್ಲಿ ಭಾರತದ ಕಡೆ ಕಣ್ಣೆತ್ತಿ ನೋಡಿದವರಿಗೆ ನಮ್ಮ ವೀರ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಶೌರ್ಯ ಮೆರೆದು ಹುತಾತ್ಮರಾದ ಸೈನಿಕರಿಗೆ ದೇಶದ ಜನ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಮನೆಯಿಂದ ಮತ್ತೊಬ್ಬರನ್ನು ಸೇನೆಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಯೋಧರನ್ನು ಕಳೆದುಕೊಂಡ ಕುಟುಂಬದವರ ಜೊತೆ ದೇಶದ ಜನರಿದ್ದಾರೆ ಎಂದು ಹೇಳಿದ್ದಾರೆ.

ಕೊರೋನಾ ವಿರುದ್ಧದ ಹೋರಾಟ ಸುದೀರ್ಘವಾಗಿ ನಡೆಯಲಿದೆ. ಜನ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸೋಂಕಿನಿಂದ ಬಚಾವಾಗುವ ಜೊತೆಗೆ ಅನ್ ಲಾಕ್ ನಲ್ಲಿ ಕೊರೋನಾವನ್ನು ಸೋಲಿಸಬೇಕೆಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...