alex Certify ಧೋತಿ ಧರಿಸಿ ಕ್ರಿಕೆಟ್‌ – ಸಂಸ್ಕೃತದಲ್ಲಿ ಕಮೆಂಟರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋತಿ ಧರಿಸಿ ಕ್ರಿಕೆಟ್‌ – ಸಂಸ್ಕೃತದಲ್ಲಿ ಕಮೆಂಟರಿ…!

ಭಾರತೀಯರಿಗೆ ಕ್ರಿಕೆಟ್​ ಮೇಲೆ ಇರುವಷ್ಟು ಪ್ರೀತಿ, ಅಭಿಮಾನ ಇತರೆ ಕ್ರಿಡೆಗಳ ಮೇಲೆ ಇಲ್ಲ ಅನ್ನೋದು ಅನೇಕ ಬಾರಿ ಸಾಬೀತಾಗಿದೆ. ಟಿವಿಯಲ್ಲಿ ಕ್ರಿಕೆಟ್​ ನೋಡ್ತಾ ನೆಚ್ಚಿನ ಆಟಗಾರನಿಗೆ ಸಪೋರ್ಟ್ ಮಾಡೋದ್ರಿಂದ ಹಿಡಿದು ಗಲ್ಲಿ ಕ್ರಿಕೆಟ್​ನವರೆಗೂ ಚೆಂಡು ಹಾಗೂ ಬ್ಯಾಟ್​ನ ಮೇಲಿನ ಪ್ರೀತಿ ಕೊನೆಯಾಗೋದಿಲ್ಲ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ನಡೆದ ಕ್ರಿಕೆಟ್​ ಟೂರ್ನಮೆಂಟ್​ ಒಂದು ನೆಟ್ಟಿಗರಿಗೆ ಸಪ್ರೈಸ್​ ಒಂದನ್ನ ನೀಡಿದೆ.

ಮಹರ್ಷಿ ವೇದಿಕ್​ ಪರಿವಾರ ನಡೆಸಿದ ಈ ಟೂರ್ನಮೆಂಟ್​​ನಲ್ಲಿ ಆಟಗಾರರು ಧೋತಿ ಹಾಗೂ ಟೀ ಶರ್ಟ್​ ಧರಿಸಿದ್ದು ಕಂಡು ಬಂತು. ಒಂದು ತಂಡ ಕೇಸರಿ ಬಣ್ಣದ ಟೀ ಶರ್ಟ್​ ಹಾಕಿದ್ರೆ ಇನ್ನೊಂದು ತಂಡ ಬಿಳಿ ಬಣ್ಣದ ಟೀ ಶರ್ಟ್ ಹಾಕಿತ್ತು. ಆದರೆ ಎರಡೂ ತಂಡದ ಸದಸ್ಯರು  ಧೋತಿ ಧರಿಸಿದ್ದರು.

ಇನ್ನು ಅಂಪೈರ್​ ಕೂಡ ಕುರ್ತಾ ಜೊತೆ ಧೋತಿ ಧರಿಸಿ ಶಲ್ಯವನ್ನ ಹೆಗಲ ಮೇಲೆ ಹಾಕಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದ್ರು. ಇದರಲ್ಲಿ ಅನೇಕ ಆಟಗಾರರು ತಿಲಕವನ್ನ ಧರಿಸಿದ್ದೂ ಕಂಡುಬಂತು. ಇದೆಲ್ಲದರ ಜೊತೆಗೆ ಕಮೆಂಟರಿಯನ್ನ ಹಿಂದಿ ಇಲ್ಲವೇ ಇಂಗ್ಲೀಷ್​ ಭಾಷೆಯಲ್ಲಿ ನೀಡೋದ್ರ ಬದಲು ಸಂಸ್ಕೃತ ಭಾಷೆಯಲ್ಲಿ ನೀಡಲಾಗಿದೆ. ಮಹರ್ಷಿ ಮಹೇಶ್​​ ಯೋಗಿಯವರ 104ನೇ ಜನ್ಮದಿನೋತ್ಸವ ಪ್ರಯುಕ್ತ ಭೋಪಾಲ್​ನಲ್ಲಿ ಮಹರ್ಷಿ ಕಪ್​ ಟೂರ್ನಮೆಂಟ್​ ಆಯೋಜಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...