alex Certify ಐಸ್​ ಕ್ರೀಂ ನೀಡಲು ಇಲ್ಲಿ ಬಳಸಲಾಗುತ್ತೆ ವಿಶೇಷ ಕಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್​ ಕ್ರೀಂ ನೀಡಲು ಇಲ್ಲಿ ಬಳಸಲಾಗುತ್ತೆ ವಿಶೇಷ ಕಪ್

ಸಾಮಾನ್ಯವಾಗಿ ಐಸ್​ಕ್ರೀಂಗಳನ್ನ ಪ್ಲಾಸ್ಟಿಕ್​ ಕಪ್​ಗಳಲ್ಲಿ ಕೊಡ್ತಾರೆ. ದೊಡ್ಡ ದೊಡ್ಡ ರೆಸ್ಟಾರೆಂಟ್​ಗಳಿಗೆ ಹೋದ್ರೆ ಗ್ಲಾಸ್​ ಕಪ್​ಗಳಲ್ಲಿ ಐಸ್​ ಕ್ರೀಂಗಳನ್ನ ಸರ್ವ್​ ಮಾಡಲಾಗುತ್ತೆ. ಆದರೆ ಬಾಳೆ ಎಲೆಯಲ್ಲಿ ಐಸ್​ ಕ್ರೀಂ ಸರ್ವ್​ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ..?

ಇಂತಹದ್ದೊಂದು ಅಪರೂಪದ ಐಸ್​ ಕ್ರೀಂ ಕಪ್​ ಸದ್ಯ ಟ್ವಿಟರ್​ನಲ್ಲಿ ಸದ್ದು ಮಾಡ್ತಿದೆ. ಪರಿಸರ ಪ್ರಿಯ ಎರಿಕ್​ ಸೊಲ್ಹೇಮ್​ ಪೋಸ್ಟ್ ಮಾಡಿದ ಐಸ್​ ಕ್ರೀಂ ಫೋಟೋದಲ್ಲಿ ಕಪ್​ ರೂಪದಲ್ಲಿ ಬಾಳೆ ಗಿಡದ ಎಲೆಯನ್ನ ಬಳಸಲಾಗಿದ್ರೆ ಬಿದಿರಿನಿಂದ ಮಾಡಲಾದ ಚಮಚವನ್ನ ಇಡಲಾಗಿದೆ.

ಭಾರತದಲ್ಲಿ ನಾನು ಇಂತಹದ್ದೊಂದು ಐಸ್​ ಕ್ರೀಂ ಕಪ್​ ಹಾಗೂ ಚಮಚವನ್ನ ನೋಡಿದೆ. ಇದನ್ನ ನೋಡ್ತಿದ್ರೆ ನಾವು ಪ್ಲಾಸ್ಟಿಕ್​ನ್ನ ಬಳಕೆ ಮಾಡೋ ಅಗತ್ಯವೇ ಇಲ್ಲ ಎಂದು ಎನಿಸುತ್ತದೆ ಅಂತಾ ಬರೆದುಕೊಂಡಿದ್ದಾರೆ.

ಇನ್ನು ಈ ಐಸ್​ಕ್ರೀಂ ಕಪ್​ನ ಫೋಟೋವನ್ನ ಮೊದಲು ಫೇಸ್​ಬುಕ್​ನ ಇನಿಷಿಯೇಟಿವ್​ ಯುನೈಟೆಡ್​ ನಾಥ್​ ಈಸ್ಟ್ ಫೇಜ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಸಣ್ಣ ಪ್ರಯತ್ನವಾದರೂ ಪ್ಲಾಸ್ಟಿಕ್​ ಬಳಕೆಯನ್ನ ನಿಲ್ಲಿಸೋಕೆ ಇದು ಉತ್ತಮ ಹೆಜ್ಜೆಯಾಗಿದೆ ಅಂತಾ ಬರೆಯಲಾಗಿದೆ.

ಟ್ವಿಟರ್​ನಲ್ಲಿ ಈ ಫೋಟೋಗೆ ಸಾಕಷ್ಟು ಕಮೆಂಟ್​ಗಳು ಬಂದಿವೆ. ಕೆಲವರು ಇದು ಕೇರಳದ ಪದ್ಧತಿ ಅಂದರೆ ಇನ್ನೂ ಕೆಲವರು ದೊಡ್ಡ ದೊಡ್ಡ ರೆಸ್ಟಾರೆಂಟ್​ಗಳೂ ಇದನ್ನ ಫಾಲೋ ಮಾಡಬೇಕು ಅಂತಾ ಟ್ವೀಟಾಯಿಸಿದ್ದಾರೆ.

Ice cream served in banana leaf cup with bamboo spoon. Small but great start to end plastic waste.

Posted by Initiative United North-East on Tuesday, September 3, 2019

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...