alex Certify ಇಲ್ಲಿದೆ ಈ ವರ್ಷದ ಟಾಪ್​ 10 ಟ್ರೆಂಡಿಂಗ್​ ವ್ಯಕ್ತಿಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಈ ವರ್ಷದ ಟಾಪ್​ 10 ಟ್ರೆಂಡಿಂಗ್​ ವ್ಯಕ್ತಿಗಳ ಪಟ್ಟಿ

2020ನೇ ಇಸ್ವಿ ಕೊನೆಯಾಗೋಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಕೊರೊನಾ ವೈರಸ್​ನಿಂದಾಗಿ ಈ ವರ್ಷದ ವಿಶ್ವದ ಎಲ್ಲಾ ಜನತೆಗೆ ಸಂಕಷ್ಟಕ್ಕೆ ಸಿಲುಕ್ಕಿದ್ದಂತೂ ಸತ್ಯ. ಹೊರಗೆ ಹೋಗಲಾರದೇ ಮನೆಯಲ್ಲೂ ಸಮಯ ಕಳೆಯಲು ಕಷ್ಟ ಪಡುತ್ತಿದ್ದ ಜನತೆ ಈ ವರ್ಷ ಇಂಟರ್ನೆಟ್​ನ್ನ ಹೆಚ್ಚು ಅವಲಂಬಿಸುವಂತಾಯ್ತು. ಭಾರತದಲ್ಲೂ ಕೂಡ ಜನರು ಈ ವರ್ಷ ಇಂಟರ್ನೆಟ್​ ಮೂಲಕವೇ ಟೈಂ ಪಾಸ್​ ಮಾಡಿದ್ದಾರೆ.

ಇದೀಗ ಗೂಗಲ್​ ತನ್ನ ವಾರ್ಷಿಕ ವರದಿಯನ್ನ ಸಿದ್ಧಪಡಿಸಿದ್ದು 2020ರಲ್ಲಿ ಅತಿ ಹೆಚ್ಚು ಹುಡುಕಾಟಕ್ಕೊಳಗಾದ ವ್ಯಕ್ತಿಗಳ ಹೆಸರನ್ನ ರಿವೀಲ್​ ಮಾಡಿದೆ. ಇದರಲ್ಲಿ ಟಾಪ್​ 10 ಪಟ್ಟಿ ಇಲ್ಲಿದೆ ನೋಡಿ.

1. ಜೋ ಬಿಡೆನ್​ : ಅಮೆರಿಕ ಅಧ್ಯಕ್ಷ ಈ ಹುಡುಕಾಟದ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನ ಅಲಂಕರಿಸಿದ್ದಾರೆ. ಇವರು ಅಮೆರಿಕ ಅಧ್ಯಕ್ಷರಾಗಿದ್ದರೂ ಸಹ ಭಾರತೀಯರು ಇವರು ಬಗ್ಗೆ ಅತೀ ಹೆಚ್ಚು ಬಾರಿ ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದಾರಂತೆ.

2. ಅರ್ನಬ್​ ಗೋ ಸ್ವಾಮಿ: ಖಾಸಗಿ ಸುದ್ದಿ ವಾಹಿನಿ ನಿರೂಪಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿಯಲ್ಲಿ ವಿವಾದಕ್ಕೆ ಸಿಲುಕಿದ್ದ ಈ ಖ್ಯಾತ ನಿರೂಪಕನ ಬಗ್ಗೆ ಭಾರತೀಯರು ಇಂಟರ್ನೆಟ್​ನಲ್ಲಿ ಅತಿಯಾಗಿ ಹುಡುಕಾಟ ನಡೆಸಿದ್ದಾರೆ.

3. ಕನ್ನಿಕಾ ಕಪೂರ್ : ಜೋ ಬಿಡೆನ್​ ಹಾಗೂ ಅರ್ನಬ್​ ಗೋಸ್ವಾಮಿ ಬಳಿಕ ಈ ಪಟ್ಟಿಯಲ್ಲಿ ಸ್ಥಾನ ಪಡೆದವರು ಬಾಲಿವುಡ್​ ಗಾಯಕಿ ಕನ್ನಿಕಾ ಕಪೂರ್. ಏಪ್ರಿಲ್​​ನಲ್ಲಿ ಕೋವಿಡ್​ ಮಾನದಂಡಗಳನ್ನ ಅನುಸರಿಸದ ಕಾರಣ ಸೋಂಕಿಗೆ ಗುರಿಯಾಗುವ ಮೂಲಕ ಸಖತ್​ ಸುದ್ದಿಯಾಗಿದ್ದರು. ಅಲ್ಲದೇ ಕೊರೊನಾ ವೈರಸ್​ ಸೋಂಕಿಗೆ ಒಳಗಾದ ಮೊದಲ ತಾರೆ ಎಂಬ ದಾಖಲೆಯನ್ನೂ ಇವರು ಮಾಡಿದ್ದಾರೆ.

4. ಕಿಮ್​ ಜಂಗ್​ ಉನ್​ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಕಿಮ್ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವದಂತಿ ಹರಿದಾಡಿತ್ತು.

5.ಅಮಿತಾಭ್​ ಬಚ್ಚನ್​ : ಪ್ರಸ್ತುತ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಬಿಗ್​ ಬಿ ಟಾಪ್​ ಫೈವ್​ ಲಿಸ್ಟ್​ನಲ್ಲಿ ಸೇರಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ವೇಳೆ ಈ ನಟ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದರು.

6. ರಶೀದ್ ಖಾನ್​ : ಸನ್​ ರೈಸರ್ಸ್​ ಹೈದರಾಬಾದ್​ ತಂಡದ ಆಟಗಾರ ರಶೀದ್​ ಖಾನ್​ ಆರನೇ ಸ್ಥಾನದಲ್ಲಿದ್ದಾರೆ. ವಿಶ್ವದ ನಂಬರ್​ 1 ಟಿ 20 ಬೌಲರ್​ ಈ ಬಾರಿಯ ಐಪಿಎಲ್​ನಲ್ಲಿ ಹಿಟ್​ ಆಗಿದ್ದರು.

7. ರಿಯಾ ಚಕ್ರವರ್ತಿ: ಸುಶಾಂತ್​ ಸಿಂಗ್​ ರಜಪೂತ್​ ನಿಧನದ ಬಳಿಕ ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದಾರೆ. ಸಿಬಿಐ, ಇಡಿ ಹಾಗೂ ಎನ್​ಸಿಬಿಯಿಂದ ತನಿಖೆಗೆ ಒಳಗಾಗಿರುವ ಈ ನಟಿ ಜೈಲು ವಾಸವನ್ನೂ ಅನುಭವಿಸಿ ಜಾಮೀನಿನ ಮೇಲೆ ಹೊರಗಿದ್ದಾರೆ.

8. ಕಮಲಾ ಹ್ಯಾರಿಸ್​ : ಟಾಪ್​ ಟ್ರೆಂಡಿಂಗ್​ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಕೂಡ ಸ್ಥಾನ ಪಡೆದಿದ್ದಾರೆ. ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗುವ ಮೂಲಕ ಇವರು ಇತಿಹಾಸ ರಚಿಸಿದ್ದಾರೆ. ಇದು ಮಾತ್ರವಲ್ಲದೇ ಉಪಾಧ್ಯಕ್ಷೆ ಸ್ಥಾನ ಪಡೆದ ಮೊದಲ ಕಪ್ಪು ಮಹಿಳೆ ಹಾಗೂ ಮೊದಲ ಏಷಿಯನ್​ ಅಮೆರಿಕನ್​ ಎಂಬ ಕೀರ್ತಿಯೂ ಇವರಿಗೆ ಸಲ್ಲುತ್ತೆ.

9. ಅಂಕಿಂತಾ ಲೋಖಂಡೆ : ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್ ಸಾವಿನ ಬಳಿಕ ಅವರ ಮಾಜಿ ಗೆಳತಿ ನಟಿ ಅಂಕಿತಾ ಲೋಖಂಡೆ ಕೂಡ ಈ ವರ್ಷ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ರಜಪೂತ್​ ಸಾವಿನ ತನಿಖೆಯನ್ನ ಸಿಬಿಐ ತನಿಖೆಗೆ ವಹಿಸವೇಕು ಎಂದು ಒತ್ತಾಯಿಸಿದ ಮೊದಲ ನಟಿ ಇವರಾಗಿದ್ದಾರೆ.

10: ಕಂಗನಾ ರಣಾವತ್​ : ವಿವಾದಗಳ ರಾಣಿ ಕಂಗನಾ ರಣಾವತ್​ ಟಾಪ್​ ಟ್ರೆಂಡಿಂಗ್​ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಟ್ವಿಟರ್​ನಲ್ಲಿ ವಿವಾದಾತ್ಮಕ ಪೋಸ್ಟ್​ಗಳ ಮುಖಾಂತರವೇ ಈ ನಟಿ ಭಾರೀ ಸುದ್ದಿಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...