alex Certify ಪೆಟ್ರೋಲ್ ಬೆಲೆ ಏರಿಕೆಯಾಗಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್ ಬೆಲೆ ಏರಿಕೆಯಾಗಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ…?

ದೇಶದ ಎಲ್ಲಾ ರಾಜ್ಯಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಕೆಲ ನಗರಗಳಲ್ಲಂತೂ ಪೆಟ್ರೋಲ್ ದರ ಪ್ರತಿ ಲೀಟರ್​ಗೆ ನೂರು ರೂಪಾಯಿಯ ಗಡಿ ದಾಟಿದೆ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಬೆಲೆ ಏರಿಕೆ ಖಂಡಿಸಿ ದಿನಕ್ಕೊಂದು ಪೋಸ್ಟ್ ವೈರಲ್​ ಆಗ್ತಾನೇ ಇರುತ್ತೆ.

ಇದೀಗ ಈ ಸಾಲಿಗೆ ಇನ್ನೊಂದು ಫೋಟೋ ಸೇರಿದೆ. ಸೋಶಿಯಲ್​ ಮೀಡಿಯಾದಲ್ಲಿ ಪೆಟ್ರೋಲ್​ – ಡೀಸೆಲ್​ ದರ ಏರಿಕೆ ಖಂಡಿಸಿ @drsabirsyed ಎಂಬ ಹೆಸರಿನ ಟ್ವಿಟರ್​ ಬಳಕೆದಾರ ಫೋಟೋವೊಂದನ್ನ ಶೇರ್​ ಮಾಡಿದ್ದಾರೆ. ಇದರಲ್ಲಿ ಕಾರನ್ನು ಗಾರ್ಡನ್​ ಆಗಿ ಮಾರ್ಪಾಡು ಮಾಡಲಾಗಿದೆ. ಕಾರನ್ನು ಉಲ್ಟಾ ನಿಲ್ಲಿಸಿ ಅದರ ಮೇಲೆ ಗಿಡಗಳನ್ನ ಬೆಳೆಸಿದ್ದನ್ನ ನೀವು ಕಾಣಬಹುದಾಗಿದೆ. ಈ ಪೋಸ್ಟ್ ವೈರಲ್​ ಆಗಿರೋದು ಮಾತ್ರವಲ್ಲದೇ ಫೋಟೋ ನೋಡಿದ ಇತರೆ ಟ್ವೀಟಿಗರು ಸಾಕಷ್ಟು ಟ್ರೋಲ್​ಗಳನ್ನ ಶೇರ್​ ಮಾಡ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...