ಅಮೆರ್ ಕೋಟೆಯಲ್ಲಿ ಆನೆಗಳನ್ನ ಬಳಕೆ ಮಾಡುವ ಬದಲು ರಥದ ಮಾದರಿಯ ವಾಹನಗಳನ್ನ ಬಳಕೆ ಮಾಡಿ ಎಂದು ಬೇಡಿಕೆ ಇಟ್ಟಿರುವ ಪೇಟಾ ಸಮುದಾಯ, ರಾಜಸ್ಥಾನ ಮುಖ್ಯ ಕಾರ್ಯದರ್ಶಿ ನಿರಂಜನ್ ಆರ್ಯಗೆ ರಥದ ಮಾದರಿಯ ವಾಹನದ ವಿನ್ಯಾಸವನ್ನ ಸಲ್ಲಿಸಿದೆ.
ಪೇಟಾ ಇಂಡಿಯಾ ಹಾಗೂ ಡಸ್ಮೇನಿಯಾ ವಿನ್ಯಾಸದ ಮಹಾರಾಜ ಎಂದು ಹೆಸರಿಡುವಂತೆ ಸಲಹೆ ನೀಡಿರುವ ಈ ವಾಹನವು ರಾಜ ರಥವನ್ನ ಹೋಲುತ್ತಿದೆ. ಈ ರಾಜ ರಥವು ಪ್ರತಿ ಬಾರಿಗೆ ನಾಲ್ಕು ಪ್ರವಾಸಿಗರನ್ನ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಅಮೆರ್ ಕೋಟೆಯಲ್ಲಿರುವ ಗುಡ್ಡಗಾಡು ಪ್ರದೇಶಕ್ಕೆ ಸೂಕ್ತವಾಗುವ ರೀತಿಯಲ್ಲೇ ಈ ವಾಹನದ ವಿನ್ಯಾಸವನ್ನ ಮಾಡಲಾಗಿದೆ.
ವಿಡಿಯೋ: ಲೈವ್ ನಲ್ಲಿ ಹವಾಮಾನ ವರದಿ ನೀಡುತ್ತಿದ್ದ ಅಮ್ಮನ ಬಳಿ ಓಡಿ ಬಂದ ಪುಟ್ಟ ಕಂದ
ಅಮೆರ್ ಕೋಟೆಯಲ್ಲಿರುವ ಆನೆಗಳು ಕಣ್ಣಿನ ತೊಂದರೆಯಿಂದ ಬಳಲುತ್ತಿರೋದು ಹಾಗೂ ಸವಾರಿಗಾಗಿ ಆನೆಗೆ ಹಿಂಸಿಸಲಾಗುತ್ತಿತ್ತು. ಕೇಂದ್ರ ಸರ್ಕಾರ 2020ರ ಮಾರ್ಚ್ ಆರರಂದು ಆನೆ ಸವಾರಿ ಕೊನೆಗೊಳಿಸಲು ತಜ್ಞರ ಸಮಿತಿಯನ್ನ ರಚಿಸಿತ್ತು. ಇದೀಗ ಡಸ್ಮೇನಿಯಾ ಪರಿಸರ ಸ್ನೇಹಿ ಎಲೆಕ್ಟ್ರಿಕ್ ರಥ ವಿನ್ಯಾಸಗೊಳಿಸಿದ್ದು ಇದರಿಂದ ಪ್ರವಾಸಿಗರಿಗೆ ಸ್ಮರಣೀಯ ಅನುಭವ ಸಿಗೋದ್ರ ಜೊತೆಗೆ ಕ್ರೂರತನದ ಆನೆ ಸವಾರಿ ಕೊನೆಗೊಳಿಸಲು ಸಹಕಾರಿಯಾಗಲಿದೆ ಎಂದು ಡೆಸ್ಮೇನಿಯಾ ವ್ಯವಸ್ಥಾಪಕ ನಿರ್ದೇಶಕ ಅನುಜ್ ಪ್ರಸಾದ್ ಹೇಳಿದ್ದಾರೆ.