alex Certify ಮದುಮಗನ ರೀತಿಯಲ್ಲಿ ತಯಾರಾಯ್ತು ಶ್ವಾನ..! ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುಮಗನ ರೀತಿಯಲ್ಲಿ ತಯಾರಾಯ್ತು ಶ್ವಾನ..! ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​

ಸಾಮಾಜಿಕ ಜಾಲತಾಣದ ಈ ಜಮಾನಾದಲ್ಲಿ ಮದುವೆ ಪ್ರಪೋಸ್​ಗಳನ್ನೂ ಆನ್​ಲೈನ್​ನಲ್ಲೇ ಹುಡುಕೋದು ಕಾಮನ್​ ಆಗಿದೆ . ಅದೇ ರೀತಿ ಕೇರಳದ ವ್ಯಕ್ತಿಯೊಬ್ಬರು ತಮ್ಮ ಮುದ್ದಾದ ನಾಯಿಗೆ ಅಲಂಕಾರ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಶೇರ್​ ಮಾಡುವ ಮೂಲಕ ವಧು ಅನ್ವೇಷಣೆ ಮಾಡ್ತಿದ್ದಾರೆ.

ಕೇರಳದ ಸಾಂಪ್ರದಾಯಿಕ ಉಡುಗೆ ಕಸವು ಮುಂಡು ಹಾಗೂ ಗುಲಾಬಿ ಬಣ್ಣದ ಶರ್ಟ್​ ಧರಿಸಿರುವ ಪಗ್​ ಜಾತಿಯ ನಾಯಿ ಬಾಳೆ ಎಲೆಯ ಮುಂದೆ ಕುಳಿತಿದೆ.

ಇನ್ನೊಂದು ಫೋಟೋದಲ್ಲಿ ನಾಯಿಯನ್ನ ಎರಡೇ ಕಾಲಿನಲ್ಲಿ ನಿಲ್ಲಿಸಲಾಗಿದೆ. ಈ ಫೋಟೋ ಶೇರ್ ಮಾಡಿರುವ ನಾಯಿ ಮಾಲೀಕರು, ನಮ್ಮ ಹ್ಯಾಂಡ್​ಸಮ್​ ಮಲಯಾಳಿ ಹುಡುಗನಿಗೆ ಸುಂದರ ಹುಡುಗಿಯನ್ನ ಹುಡುಕುತ್ತಿದ್ದೇವೆ ಎಂದು ಪೋಸ್ಟ್ ಹಾಕಿದ್ದಾರೆ.

ಫೇಸ್​​ಬುಕ್​​ನಲ್ಲಿ ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದಾದ ಬಳಿಕ ನಾಯಿಯ ಫೋಟೋವನ್ನ ಟ್ವಿಟರ್​ನಲ್ಲೂ ಶೇರ್​ ಮಾಡಿದ ನೆಟ್ಟಿಗರೊಬ್ಬರು ಇದನ್ನೆಲ್ಲ ನೋಡೋಕೆ ಅಂತಾನೇ ನಾನು ಫೇಸ್​ಬುಕ್​ನಲ್ಲಿ ಇದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಶ್ವಾನದ ಫೋಟೋವಂತೂ ಟ್ರೋಲಿಗರ ಪಾಲಿಗೆ ಬಾಡೂಟವಾಗಿದೆ. ಮುದ್ದು ಮುದ್ದಾದ ನಾಯಿಯ ಫೋಟೋ ನೋಡಿದ ನೆಟ್ಟಿಗರು ಲೈಕ್ ಮೇಲೆ ಲೈಕ್​ ಕೊಡ್ತಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...