alex Certify ಪ್ರಧಾನಿ ಮೋದಿ ಹತ್ಯೆ ಮಾಡುವುದಾಗಿ ಪೋಸ್ಟ್ ಹಾಕಿದವನು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಹತ್ಯೆ ಮಾಡುವುದಾಗಿ ಪೋಸ್ಟ್ ಹಾಕಿದವನು ಅರೆಸ್ಟ್

ಪುದುಚೇರಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಲು ನಾನು ಸಿದ್ಧನಿದ್ದೇನೆ. ಇದಕ್ಕಾಗಿ ನನಗೆ 5 ಕೋಟಿ ರೂ. ಕೊಡಲು ಯಾರು ಸಿದ್ಧರಿದ್ದೀರಿ ?

ಫೇಸ್ ಬುಕ್ ನಲ್ಲಿ ಹೀಗೊಂದು ಆತಂಕಕಾರಿ ಪೋಸ್ಟ್ ಹಾಕಿದ್ದ ಆರ್ಯನ್ ಕುಪ್ಪಂ ಪಟ್ಟಣದ ರಿಯಲ್ ಎಸ್ಟೇಟ್ ಉದ್ಯಮಿ ಸತ್ಯಾನಂದಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳಿನಲ್ಲಿ ಸತ್ಯಾನಂದ ಹಾಕಿದ್ದ ಪೋಸ್ಟ್ ಗಮನಿಸಿದ ಟ್ಯಾಕ್ಸಿ ಚಾಲಕ ತಂಗದುರೈ, ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಶುಭ ಸುದ್ದಿ: ಟೆಸ್ಟ್ ಇಲ್ಲದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಲ್ಲಿದೆ ಮಾಹಿತಿ

ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದ ಪೋಸ್ಟ್ ಗಳನ್ನು ಗಮನಿಸಿದಾಗ ಅನೇಕ ಗಣ್ಯರ ವಿರುದ್ಧ ಇದೇ ರೀತಿ ಪೋಸ್ಟ್ ಗಳನ್ನು ಹಾಕಿರುವುದೂ ಅಲ್ಲದೆ, ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ರೀತಿಯ ಪೋಸ್ಟ್ ಗಳನ್ನೂ ಮಾಡಿದ್ದಾನೆ.

ನ್ಯಾಯಾಲಯಕ್ಕೆ ಈತನನ್ನು ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 505(1), 505(2) ರ ಅನ್ವಯ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...