alex Certify ಪಾಕ್ ಕಮೆಡಿಯನ್ ಮಾಡಿರುವ ಅನುಕರಣೆ ವಿಡಿಯೋಗೆ ಶಶಿ ತರೂರ್ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ಕಮೆಡಿಯನ್ ಮಾಡಿರುವ ಅನುಕರಣೆ ವಿಡಿಯೋಗೆ ಶಶಿ ತರೂರ್ ಫಿದಾ

ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್​, ಸದಾ ತಮ್ಮ ಆಂಗ್ಲ ಭಾಷೆ ಪ್ರಯೋಗದ ಮೂಲಕವೇ ಸುದ್ದಿಯಾಗ್ತಾ ಇರ್ತಾರೆ. ಸಂದರ್ಶನದ ವೇಳೆಯಲ್ಲಿ ಅತ್ಯಂತ ಕ್ಲಿಷ್ಟಕರ ಇಂಗ್ಲಿಷ್​ ಭಾಷೆಯ ಬಳಕೆ ಮಾಡೋದ್ರಲ್ಲಿ ತರೂರ್​ ಎತ್ತಿದ ಕೈ.

Sesquipedalian’, ‘Perspecacity’, ‘Gonzo’ ಸೇರಿದಂತೆ ಇನ್ನೂ ಕೆಲ ಇಂಗ್ಲಿಷ್​ ಪದಗಳು ಕೇಳುಗರು ತಲೆ ಕೆಡಿಸಿಕೊಳ್ಳುವಂತೆ ಮಾಡಿವೆ.

ಈಗಾಗಲೇ ತರೂರಿಯನ್​ ಇಂಗ್ಲಿಷ್​ ಅಂತಾ ಸಾಕಷ್ಟು ಟ್ರೋಲ್​ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡ್ತಾನೇ ಇರುತ್ತೆ. ಪಾಕಿಸ್ತಾನದ ಸ್ಥಳೀಯ ಕಾಮಿಡಿಯನ್​ ಅಕ್ಬರ್​ ಚೌಧರಿ ಎಂಬವರು ತರೂರ್​ರಂತೆ ಇಂಗ್ಲಿಷ್​ ಭಾಷೆಯನ್ನ ಹೇಗೆ ಬಳಸಬೇಕು ಅನ್ನೋದಕ್ಕೆ 2 ಫನ್ನಿ ಐಡಿಯಾಗಳನ್ನ ನೀಡಿದ್ದಾರೆ.

ಆಕ್ಸ್​ಫರ್ಡ್ ನಿಘಂಟನ್ನು ಮಿಕ್ಸಿಯಲ್ಲಿ ಹಾಕಿ. ರುಬ್ಬಿದಂತೆ ಮಾಡಿ ಅದನ್ನ ದೇಹಕ್ಕೆ ತೆಗೆದುಕೊಳ್ಳುವಂತೆ ಹಾಗೂ ಅದೇ ನಿಘಂಟನ್ನ ಪುಡಿ ಮಾಡಿ ಡ್ರಗ್​ ರೀತಿಯಲ್ಲಿ ಸೇವಿಸಿದಂತೆ ನಟಿಸುವ ಮೂಲಕ ಅಕ್ಬರ್, ಶಶಿ ತರೂರ್​ ಮಾತನಾಡುವ ರೀತಿಯಲ್ಲೇ ಮಾತನಾಡಿದ್ದಾರೆ. ಈ ಫನ್ನಿ ವಿಡಿಯೋ ಸಖತ್​ ವೈರಲ್​ ಆಗಿದೆ. ಖುದ್ದು ಶಶಿ ತರೂರ್​ ಕೂಡ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...