alex Certify BIG NEWS: ಕೊರೊನಾ ಲಸಿಕೆ ಲಭ್ಯತೆ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ – ಅಂಕಿಅಂಶ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಲಸಿಕೆ ಲಭ್ಯತೆ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ – ಅಂಕಿಅಂಶ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ

ದೇಶದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಕೋಟಿಗೂ ಅಧಿಕ ಲಸಿಕೆ ಡೋಸ್​ಗಳ ಸಂಗ್ರಹವಿದೆ. ಹಾಗೂ ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿ 57,70,000 ಡೋಸ್​ಗಳನ್ನ ಸ್ವೀಕರಿಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 15,95,96,140 ಡೋಸ್​ಗಳನ್ನ ಉಚಿತವಾಗಿ ನೀಡಿದೆ. 1 ಕೋಟಿಗೂ ಹೆಚ್ಚು ಕೋವಿಡ್​ 19 ಲಸಿಕೆಗಳು ಅಥವಾ 1,06,19,892 ಡೋಸ್​ ಲಸಿಕೆಗಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಸಚಿವಾಲಯ ಹೇಳಿದೆ.

ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 57,70,000 ಕೋವಿಡ್​ ಲಸಿಕಾ ಡೋಸ್​ಗಳನ್ನ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆಗಳು ಸಂಪೂರ್ಣ ಖಾಲಿಯಾಗಿವೆ. ಇದರಿಂದ ಲಸಿಕೆ ಅಭಿಯಾನಕ್ಕೆ ಹೊಡೆತ ಬೀಳಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಕೇಂದ್ರ ಸಚಿವಾಲಯ ಈ ಮಾಹಿತಿ ನೀಡಿದೆ.

ಏಪ್ರಿಲ್​ 28ರಂದು ಮಹಾರಾಷ್ಟ್ರ ಒಟ್ಟು 1,58,62,470 ಕೋವಿಡ್​ ಡೋಸ್​ಗಳನ್ನ ಸ್ವೀಕಾರ ಮಾಡಿದೆ. ಇದರಲ್ಲಿ ವ್ಯರ್ಥವಾದ ಲಸಿಕೆಯೂ ಸೇರಿದಂತೆ ಒಟ್ಟು 1,53,56,151 ಲಸಿಕೆಗಳನ್ನ ಬಳಕೆ ಮಾಡಲಾಗಿದೆ. ಈ ಲೆಕ್ಕಾಚಾರದ ಪ್ರಕಾರ ಮಹಾರಾಷ್ಟ್ರದ ಬಳಿ ಇನ್ನೂ 5,06,319 ಲಸಿಕಾ ಡೋಸ್​ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿ ಲಸಿಕೆಗಳನ್ನ ಕಳುಹಿಸಲಾಗುತ್ತೆ ಎಂದು ಸಚಿವಾಲಯ ಹೇಳಿದೆ.

ದೆಹಲಿ ಕೂಡ 36,90,710 ಲಸಿಕೆಗಳನ್ನ ಸ್ವೀಕಾರ ಮಾಡಿದೆ. ವ್ಯರ್ಥವಾದ ಡೋಸ್​ ಸೇರಿದಂತೆ 32,43,300 ಲಸಿಕಾ ಡೋಸ್​ಗಳು ಖಾಲಿಯಾಗಿದೆ. ಇದಾದ ಬಳಿಕವೂ ದೆಹಲಿಯಲ್ಲಿ 4,47,410 ಡೋಸ್​ ಇನ್ನೂ ಲಭ್ಯವಿದೆ. ಶೀಘ್ರದಲ್ಲೇ ದೆಹಲಿಗೆ 1,50,000 ಡೋಸ್​ಗಳನ್ನ ಕಳುಹಿಸಿಕೊಡಲಾಗುತ್ತೆ ಎಂದು ಮಾಹಿತಿ ನೀಡಿದೆ.

ಅದೇ ರೀತಿ ಕರ್ನಾಟಕಕ್ಕೂ 94,47,900 ಡೋಸ್​ ಲಸಿಕೆಗಳನ್ನ ಕಳುಹಿಸಿಕೊಡಲಾಗಿದೆ. ಇದರಲ್ಲಿ ವ್ಯರ್ಥವಾದ ಲಸಿಕೆ ಸೇರಿ 91,01,215 ಡೋಸ್​ ಖಾಲಿಯಾಗಿದೆ. ಆದ್ದರಿಂದ ರಾಜ್ಯದ ಬಳಿ ಇನ್ನೂ 3,46,685 ಡೋಸ್​ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ 4,00,000 ಲಸಿಕಾ ಡೋಸ್​ಗಳನ್ನ ಪೂರೈಕೆ ಮಾಡಲಾಗುತ್ತೆ ಎಂದು ಸಚಿವಾಲಯ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...