alex Certify OMG: ಮೆಟ್ಟಿಲೇರಿದ ಟ್ರಾಕ್ಟರ್‌ ಕಂಡು ಚಕಿತರಾದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಮೆಟ್ಟಿಲೇರಿದ ಟ್ರಾಕ್ಟರ್‌ ಕಂಡು ಚಕಿತರಾದ ಜನ…!

ಇಂತಹ ಸಾಹಸ ನಡೆಯುವುದು ಭಾರತದಲ್ಲಿ ಮಾತ್ರ ಇರಬಹುದೇನೊ.‌ ಉತ್ತರಾಖಂಡದ ಕೇದಾರನಾಥದಲ್ಲಿ ಭಾರದ ವಸ್ತು ಹೊತ್ತ ಟ್ರ್ಯಾಕ್ಟರ್ ಮೆಟ್ಟಿಲು ಹತ್ತುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ‌ ಸದ್ದು ಮಾಡಿದೆ.

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಭಾರತದಲ್ಲಿ ಮಾತ್ರ ಸಂಭವಿಸಬಹುದು” ಎಂದು ಅವರು ಶೀರ್ಷಿಕೆ ನೀಡಿದ್ದಾರೆ.

ಸೋನಾಲಿಕಾದ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್ ಮಿತ್ತಲ್ ಅವರು ಲಿಂಕ್ಡ್ಇನ್ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ʼನಮ್ಮ ಚಿಕ್ಕ ಟ್ರ್ಯಾಕ್ಟರ್ ಅಸಾಧ್ಯವಾದುದನ್ನು ಸಾಧಿಸಿದ್ದನ್ನು ನೋಡಿ ಹೆಮ್ಮೆಪಡುತ್ತೇನೆʼ ಎಂದಿದ್ದಾರೆ.

ಅಂದಹಾಗೆ ಈ ವಿಡಿಯೋದಲ್ಲಿ ಲಗ್ಗೇಜ್ ಭಾರಕ್ಕೆ ಟ್ರಾಕ್ಟರ್ ಮುಂಭಾಗದ ಟೈರ್ ಮೇಲಕ್ಕೇರದಂತೆ ಆರು ಜನ ಕುಳಿತಿದ್ದಾರೆ. ಪಕ್ಕದಲ್ಲಿ ಕಂದಕವೂ ಕಾಣಿಸುತ್ತದೆ. ಟ್ರಾಕ್ಟರ್ ಮಾತ್ರ ಮೆಟ್ಟಿಲನ್ನು ಸರಸರನೆ ಏರುವುದು ಕಾಣಿಸುತ್ತದೆ. ಟ್ವಿಟರ್‌ನಲ್ಲಿ 72,000ಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ನೂರಾರುಮಂದಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...