alex Certify BIG NEWS: ‘ಆಕ್ಸಿಜನ್’ ಅಭಾವ ನೀಗಿಸಲು ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ – ಪೋರ್ಟೆಬಲ್ ಆಕ್ಸಿಜನ್ ಸಾಂದ್ರಕಗಳ ಪೂರೈಕೆಗೆ ಗ್ರೀನ್‌ ಸಿಗ್ನಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಆಕ್ಸಿಜನ್’ ಅಭಾವ ನೀಗಿಸಲು ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ – ಪೋರ್ಟೆಬಲ್ ಆಕ್ಸಿಜನ್ ಸಾಂದ್ರಕಗಳ ಪೂರೈಕೆಗೆ ಗ್ರೀನ್‌ ಸಿಗ್ನಲ್

ಪಿಎಂ ಕೇರ್​ ಫಂಡ್​​ನಿಂದ ದೇಶದಲ್ಲಿ 1 ಲಕ್ಷ ಪೋರ್ಟಬಲ್​ ಆಕ್ಸಿಜನ್​ ಸಾಂದ್ರಕ​ಗಳ ಪೂರೈಕೆಗೆ ಪ್ರಧಾನಿ ನರೇಂದ್ರ ಮೋದಿ ಅಸ್ತು ಎಂದಿದ್ದಾರೆ.‌

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕಗಳ ಸಂಗ್ರಹ ಹೆಚ್ಚಿಸಲು ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯ್ತು.

ಈ ವೇಳೆ ಪ್ರಧಾನಿ ಮೋದಿ ಆದಷ್ಟು ಬೇಗ ಆಮ್ಲಜನಕ ಸಾಂದ್ರಕಗಳನ್ನ ಸಂಗ್ರಹಿಸಿ ಯಾವ ರಾಜ್ಯದಲ್ಲಿ ಅತೀ ಹೆಚ್ಚು ಆಮ್ಲಜನಕ್ಕೆ ಅಭಾವವಿದೆಯೋ ಅಲ್ಲಿಗೆ ಕಳುಹಿಸಿಕೊಡಿ ಎಂದು ಸೂಚನೆ ನೀಡಿದ್ದಾರೆ.

ಈ ಹಿಂದೆ ಪಿಎಂ ಕೇರ್​ ಫಂಡ್​ನಿಂದ 750 ಪಿಎಸ್​ಎ ಪ್ಲಾಂಟ್​ಗಳು ಹಾಗೂ 500 ಹೊಸ ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದ್ದರು. ಈ ಬಗ್ಗೆ ಸ್ವತಃ ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದರು.

ಆಮ್ಲಜನಕ ಸಿಲಿಂಡರ್​ಗಳ ಕೊರತೆ ಉಂಟಾಗುತ್ತಿದ್ದಂತೆಯೇ ಆಮ್ಲಜನಕ ಸಾಂದ್ರಕಗಳಿಗೆ ಮೊರೆ ಹೋಗಲಾಗುತ್ತೆ. ಇದು ಒಂದು ವೈದ್ಯಕೀಯ ಸಾಧನವಾಗಿದ್ದು ವಾಯುಮಂಡಲದಿಂದ ಗಾಳಿಯನ್ನ ಸಂಗ್ರಹಿಸುವ ಕೆಲಸ ಮಾಡುತ್ತದೆ. ಬಳಿಕ ಸಾರಜನಕವನ್ನ ಗಾಳಿಯಲ್ಲೇ ವಾಪಸ್​ ಬಿಡುತ್ತದೆ. ಹಾಗೂ ಕೇವಲ ಆಮ್ಲಜನಕವನ್ನ ಸಂಗ್ರಹಿಸಿಕೊಳ್ಳುತ್ತದೆ. ಇದರಲ್ಲಿ ಆಮ್ಲಜನಕ 85 ಪ್ರತಿಶತ ಶುದ್ಧವಾಗೇ ಇರೋದ್ರಿಂದ ತೀರಾ ಗಂಭೀರ ಲಕ್ಷಣಗಳನ್ನ ಹೊಂದಿರದ ಕೋವಿಡ್​ 19 ರೋಗಿಗಳು ಬಳಕೆ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...