alex Certify ಜಿಂಕೆ ಜೊತೆ ಚಿತ್ರದಲ್ಲಿರುವ ಮತ್ತೊಂದು ಪ್ರಾಣಿಯನ್ನು ಗುರುತಿಸಬಲ್ಲಿರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಕೆ ಜೊತೆ ಚಿತ್ರದಲ್ಲಿರುವ ಮತ್ತೊಂದು ಪ್ರಾಣಿಯನ್ನು ಗುರುತಿಸಬಲ್ಲಿರಾ….?

ಇತ್ತೀಚಿನ ದಿನಗಳಲ್ಲಂತೂ ಸಾಮಾಜಿಕ ಜಾಲತಾಣದಲ್ಲಿ ಸವಾಲುಗಳ ಮೇಲೆ ಸವಾಲುಗಳನ್ನು ಹಾಕಿಕೊಳ್ಳುವ ಪರಿಪಾಟ ಬೆಳೆದಿದೆ. ಪ್ರಶ್ನೆ ಕೇಳುವ, ಒಗಟು ಬಿಡಿಸುವ ಸವಾಲುಗಳು ಕಂಡುಬರುತ್ತಿವೆ. ಈ ಸಾಲಿನಲ್ಲಿ ಅನೇಕ ಚಿತ್ರಗಳಿಗೆ ಸಂಬಂಧಪಟ್ಟ ಸವಾಲು, ಆಪ್ಟಿಕಲ್ ಇಲ್ಯೂಜನ್ ಗೆ ಸಂಬಂಧಪಟ್ಟವು ಸಹ ಸೇರಿಕೊಂಡಿದೆ.

ಇದರ ಭಾಗವಾಗಿ ಭಾರತೀಯ ಅರಣ್ಯ ಸೇವೆ ಅಧಿಕಾರಿ ರಮೇಶ್ ಬಿಷ್ಣೋಯ್ ಅವರು ಟ್ವಿಟ್ಟರ್ ನಲ್ಲಿ ಜಿಂಕೆಯ ಫೋಟೋ ಪೋಸ್ಟ್ ಮಾಡಿದ್ದು, ಜನರ ಮುಂದೆ ಪ್ರಶ್ನೆಯೊಂದನ್ನು ಇಟ್ಟಿದ್ದಾರೆ.

ಈ ಚಿತ್ರದಲ್ಲಿ ಬೇರೊಬ್ಬರೂ ಇದ್ದಾರೆ ನೀವು ಮಾಡಬೇಕಾಗಿರುವುದು ಹತ್ತಿರದಿಂದ ಗಮನಿಸಿ…..ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ಚಿತ್ರವನ್ನು ಸೂಕ್ಷ್ಮವಾಗಿ ನೋಡಿದಾಗ ಎಡಭಾಗದ ಮೂಲೆಯಲ್ಲಿ ಜೋಡಿ ಕಿವಿಗಳು ಮಾತ್ರ ಕಾಣುತ್ತವೆ. ಅಲ್ಲಿ ಒಂದು ಹುಲಿ ಹೊಂಚು ಹಾಕಿ ಕಾದಿರುವುದನ್ನು ಗಮನಿಸಬಹುದಾಗಿದೆ. ಈ ಫೋಟೋಗೆ ನೂರಾರು ಪ್ರತಿಕ್ರಿಯೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...