alex Certify ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾಯ್ತು ‘ವಿಶ್ವ ತಾಯಂದಿರ ದಿನ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾಯ್ತು ‘ವಿಶ್ವ ತಾಯಂದಿರ ದಿನ’

ಇದೊಂದು ಅಚ್ಚರಿಯ ಘಟನೆ, ಗುಜರಾತ್ ನಲ್ಲಿ 76 ವರ್ಷದ ತಾಯಿಯನ್ನು ವ್ಯಕ್ತಿಯೊಬ್ಬರು ಸುಮಾರು ಎರಡು ವರ್ಷದ ನಂತರ ಸಂಧಿಸುವಂತಾಗಿದೆ. ವಿಶ್ವ ತಾಯಂದಿರ ದಿನದಂದೇ ಈ ಘಟನೆ ನಡೆದಿರುವುದು ವಿಶೇಷ ಸಂಗತಿ.

ಮಾನಸಿಕ ಅಸ್ವಸ್ಥತೆ ಮತ್ತು ನೆನಪಿನ ಶಕ್ತಿ ಕಳೆದುಕೊಂಡಿದ್ದ ಹರ್ಷಾ ಠಕ್ಕರ್ 2018ರಲ್ಲಿ ನಾಪತ್ತೆಯಾಗಿದ್ದರು. ಆಕೆಯ ಪುತ್ರ ಈ ವೇಳೆ ಪುಣೆಯಲ್ಲಿದ್ದರು. ತಾಯಿ ಕಾಣೆಯಾದ ಸಂಬಂಧ ಅವರು ದೂರನ್ನು ಪೊಲೀಸರಲ್ಲಿ ದಾಖಲಿಸಿದ್ದರು.

ಆದರೆ ಆಕೆ ಇರುವ ಸ್ಥಳವನ್ನು ಕಂಡು ಹಿಡಿಯಲಾಗಿರಲಿಲ್ಲ. ಆದರೆ ಇತ್ತೀಚೆಗೆ ಡೊಂಬಿವಲಿ ಪಲಾವ್ ನಗರದಲ್ಲಿ ಏಕ್ತಾ ಪ್ರತಿಷ್ಠಾನ ಸ್ವಯಂ ಸೇವಕರು ಆಕೆಯನ್ನು ಗುರುತಿಸಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ, ಬಿಕ್ಷುಕರಿಗೆ ಏಕ್ತಾ ಪ್ರತಿಷ್ಠಾನದಿಂದ ದೈನಂದಿನ ಆಹಾರಗಳನ್ನು ಪೂರೈಕೆ ಮಾಡುವಾಗ ಈ ಮಹಿಳೆ ಏಕಾಂಗಿಯಾಗಿ ತಿರುಗುವುದನ್ನು ಕಂಡುಕೊಂಡಿದ್ದಾರೆ. ಈ ವೇಳೆ ವಿಚಾರಿಸಿದಾಗ ಆ ಮಹಿಳೆ ತನ್ನ ಹೆಸರು ಮತ್ತು ಮಗನ ಹೆಸರನ್ನು ನೆನಪಿಸಿಕೊಂಡರು. ಆದರೆ ಮನೆಯ ಇತರರ ಹೆಸರು ಹಾಗೂ ವಿಳಾಸ ನೀಡಿರಲಿಲ್ಲ.

ಈ ನಡುವೆ ಆಕೆಯನ್ನು ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಕಳುಹಿಸಲು ಪ್ರಯತ್ನಿಸಲಾಯಿತಾದರೂ ಕೊರೋನಾ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಾನದ ಸ್ವಯಂಸೇವಕರಲ್ಲಿ ಒಬ್ಬರಾದ ಹಸನ್ ತಮ್ಮ‌ಮನೆಯಲ್ಲೇ ಅವಕಾಶ ನೀಡಿದರು.

ಬಳಿಕ ಸಾಮಾಜಿಕ ಜಾಲತಾಣದ ಮೂಲಕ ತೇಜಸ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅದು ಆತನ ತಾಯಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಡಿಯೋ ಕಾಲ್ ಸಹ ಮಾಡಲಾಯಿತು. ಬಳಿಕ ಪೊಲೀಸರ ಸಹಾಯದಿಂದ ತಾಯಿ- ಮಗನನ್ನು ಒಗ್ಗೂಡಿಸಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...