alex Certify ಮಹಿಳಾ ಪೈಲಟ್ ನೋಡಿ ವೃದ್ಧೆ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಪೈಲಟ್ ನೋಡಿ ವೃದ್ಧೆ ಹೇಳಿದ್ದೇನು ಗೊತ್ತಾ…?

ಸಾಮಾನ್ಯವಾಗಿ ಪೈಲಟ್​ಗಳು ಅಂದರೇನೆ ಪುರುಷರ ಮುಖ ಕಣ್ಮುಂದೆ ಬರುತ್ತೆ. ಆದರೆ ಈ ಕೆಲಸವನ್ನು ಮಹಿಳೆಯರೂ ನಿಭಾಯಿಸ್ತಾರೆ ಎಂಬ ವಿಚಾರವನ್ನ ನಾವು ಮರೆಯುವ ಹಾಗಿಲ್ಲ. ಗಯಾದಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದ ವೃದ್ಧೆ ಮಹಿಳಾ ಪೈಲಟ್​ ನೋಡಿ ಆಶ್ಚರ್ಯ ಹೊರಹಾಕಿದ್ದು ಫ್ಲೈಟ್​ನಲ್ಲಿ ಇದ್ದವರನ್ನ ನಗೆಗಡಲಲ್ಲಿ ತೇಲಿಸಿದೆ.

ಹನಾ ಖಾನ್​ ಎಂಬ ಮಹಿಳೆ ದೆಹಲಿ – ಗಯಾ ಫ್ಲೈಟ್​ನ ಪೈಲಟ್​ ಆಗಿ ನಿಯೋಜನೆಗೊಂಡಿದ್ದರು. ಫ್ಲೈಟ್ನನ ಪ್ರಯಾಣಿಕರಲ್ಲಿ ಒಬ್ಬರಾಗಿದ್ದ ವೃದ್ಧೆ ಹನಾರನ್ನ ನೋಡಿದ ಕೂಡಲೇ… ಅರೆ..! ಫೈಲಟ್​ ಸೀಟಿನಲ್ಲಿ ಹುಡುಗಿ ಕೂತಿದ್ದಾಳೆ ಎಂದು ಆಶ್ಚರ್ಯ ಹೊರಹಾಕಿದ್ದಾರೆ.

ಇದನ್ನ ಕೇಳಿದ ಸಹ ಪ್ರಯಾಣಿಕರು ಬಿದ್ದು ಬಿದ್ದು ನಕ್ಕಿದ್ದಾರೆ. ಹನಾ ಖಾನ್​ ಈ ಘಟನೆಯನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ .

— Hana Khan (@girlpilot_) November 15, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...