alex Certify ಸಂಬಂಧಿಯಿಂದಲೇ ಅತ್ಯಾಚಾರ: ಗರ್ಭಿಣಿಯಾದ ಅಪ್ರಾಪ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧಿಯಿಂದಲೇ ಅತ್ಯಾಚಾರ: ಗರ್ಭಿಣಿಯಾದ ಅಪ್ರಾಪ್ತೆ…!

28 ವರ್ಷ ವಯಸ್ಸಿನ ಸಂಬಂಧಿಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ತಿಂಗಳಿನಿಂದ ಅತ್ಯಾಚಾರವೆಸಗಿದ ಅಮಾನುಷ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಬಾಲಕಿ ಆರು ತಿಂಗಳ ಗರ್ಭಿಣಿಯಾಗಿದ್ದು ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸಂತ್ರಸ್ತೆಯ ತಾಯಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಸಂಬಂಧ ತನಿಖೆ ಕೈಗೆತ್ತಿಕ್ಕೊಂಡ ಪೊಲೀಸರು ಆರೋಪಿ ಪೂರಿಯಾ ದೆಹುರಿ ಎಂಬಾತನನ್ನ ಬಂಧಿಸಿದ್ದಾರೆ.

16 ವರ್ಷದ ಸಂತ್ರಸ್ತೆ ಹಾಗೂ ದೆಹುರಿ ಇಬ್ಬರೂ ಸಂಬಂಧಿಕರು. ಜಾಜ್​ಪುರ ಜಿಲ್ಲೆಯ ಬಲಿಚಂದ್ರಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲೇ ಇವರಿಬ್ಬರ ಮನೆ ಇತ್ತು. ಕಳೆದ ಆರು ತಿಂಗಳಿನಿಂದ ದೆಹುರಿ ಅಪ್ರಾಪ್ತೆಯನ್ನ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾನೆ. ನಿರಂತರ ಅತ್ಯಾಚಾರದಿಂದಾಗಿ ಅಪ್ರಾಪ್ತೆ ಗರ್ಭಿಣಿಯಾಗಿದ್ದಾಳೆ. ತಾನು ಗರ್ಭಿಣಿಯಾದ ವಿಚಾರವನ್ನ ಸಂತ್ರಸ್ತೆ ದೆಹುರಿಗೆ ಹೇಳಿದ್ದಾಳೆ. ಆದರೆ ಆತ ಬೆದರಿಕೆವೊಡ್ಡಿದ ಕಾರಣ ಸಂತ್ರಸ್ತೆ ತಾಯಿಯಿಂದ ಈ ವಿಚಾರವನ್ನ ಮುಚ್ಚಿಟ್ಟಿದ್ದಳು.

ಮಗಳ ದೇಹದಲ್ಲಾದ ಬದಲಾವಣೆಗಳನ್ನ ಗಮನಿಸಿದ ತಾಯಿ ಆಕೆಯನ್ನ ಪ್ರಶ್ನೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ಬಳಿಕ ತಾಯಿ ದೂರನ್ನ ದಾಖಲಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...