alex Certify ನೀಟ್ ಪಾಸ್ ಆಗಿ ಎಂಬಿಬಿಎಸ್ ಪ್ರವೇಶ ಪಡೆದ 64 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀಟ್ ಪಾಸ್ ಆಗಿ ಎಂಬಿಬಿಎಸ್ ಪ್ರವೇಶ ಪಡೆದ 64 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ

ಸಂಬಾಲಪುರ: 64 ವರ್ಷದ ವ್ಯಕ್ತಿಯೊಬ್ಬರು ಒಡಿಶಾ ಬುರ್ಲಾದ ವೀರ ಸುರೇಂದ್ರ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರೀಸರ್ಚ್ ನಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆದಿದ್ದಾರೆ.

ಬಾರ್ಘರ್ ಜಿಲ್ಲೆಯ ಅತ್ತಾಬಿರಾ ಎಂಬ ಊರಿನ ಮೂಲದ ಎಸ್ ಬಿ ಐ ಸಹಾಯಕ ಮ್ಯಾನೇಜರ್ ಆಗಿ ನಿವೃತ್ತರಾದ ಜಯಕಿಶೋರ ಪ್ರಧಾನ ಹೊಸ ಸಾಹಸಕ್ಕೆ ಕೈ ಹಾಕಿದ ಅಪರೂಪದ ವ್ಯಕ್ತಿ. 2016 ರಲ್ಲಿ ನಿವೃತ್ತರಾದ ನಂತರ ನೀಟ್ ಪರೀಕ್ಷೆ ಬರೆದು ಉತ್ತೀರ್ಣರಾದರು.

“ನಾನು ಇಂಟರ್ ಮೀಡಿಯೆಟ್ (ಪಿಯುಸಿ) ಮುಗಿದ ನಂತರ ಎಂಬಿಬಿಎಸ್ ಪ್ರವೇಶ ಪರೀಕ್ಷೆ ಬರೆದೆ. ಆದರೆ, ಉತ್ತೀರ್ಣನಾಗಲಿಲ್ಲ. ನಂತರ ಭೌತ ಶಾಸ್ತ್ರದಲ್ಲಿ ಬಿಎಸ್ಸಿ ಮಾಡಿ ಅಟ್ಟಾಬಿಟಾ ಎಂ.ಇ.ಶಾಲೆಯಲ್ಲಿ ಶಿಕ್ಷಕನಾಗಿದ್ದೆ. ನಂತರ ಇಂಡಿಯನ್ ಬ್ಯಾಂಕ್ ಹಾಗೂ 1983 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದೆ. ಈಗ ವೈದ್ಯನಾಗಿ ಬಡವರಿಗೆ ಸೇವೆ ಮಾಡುವ ಇಚ್ಛೆ ಹೊಂದಿದ್ದೇನೆ” ಎಂದು ಕಿಶೋರ‌ ಪ್ರಧಾನ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...