ಕೊರೊನಾ ವೈರಸ್ನಿಂದಾಗಿ ಜನರ ಜೀವನವೇ ಸಂಪೂರ್ಣ ಬದಲಾಗಿದೆ. ಆದರೆ ಕೋವಿಡ್ 19 ಸೋಂಕಿಗೆ ಚಾರ್ಟಡ್ ಅಕೌಟೆಂಟ್ ವ್ಯಾಸಂಗ ಮಾಡುತ್ತಿದ್ದ ಯುವಕನ ವ್ಯಾಸಂಗಕ್ಕೆ ಯಾವುದೇ ಅಡ್ಡಿ ತರಲು ಸಾಧ್ಯವಾಗಿಲ್ಲ.
ಕೊರೊನಾ ಸೋಂಕಿಗೆ ಒಳಗಾಗಿರುವ ಈ ವಿದ್ಯಾರ್ಥಿ ಓಡಿಶಾದ ಐಸೋಲೇಷನ್ ಕೇಂದ್ರದಲ್ಲಿ ಇದ್ದುಕೊಂಡೇ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಓಡಿಶಾ ಕೇಡರ್ ಐಎಎಸ್ ಅಧಿಕಾರಿ ವಿಜಯ್ ಕುಲಂಗೆ, ಕಲೆಕ್ಟರ್ ಹಾಗೂ ಡಿಎಂ ಗಂಜಮ್ ವಿದ್ಯಾರ್ಥಿಯ ಫೋಟೋವನ್ನ ಶೇರ್ ಮಾಡಿದ್ದಾರೆ. ಈ ವಿದ್ಯಾರ್ಥಿ ಬ್ರಹ್ಮಾಪುರದ ಮಹಾರಾಜ ಕೃಷ್ಣ ಚಂದ್ರ ಗಜಪತಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಐಸೋಲೇಷನ್ ಕೇಂದ್ರದಲ್ಲಿದ್ದಾರೆ.
ಸಿಎ ವಿದ್ಯಾರ್ಥಿಯ ಓದಿನ ಕಡೆಗಿನ ಆಸಕ್ತಿಯನ್ನ ಗಮನಿಸಿದ ಅವರು, ಯಶಸ್ಸು ಅಕಸ್ಮಾತ್ ಆಗಿ ಯಾರಿಗೂ ಸಿಗೋದಿಲ್ಲ. ಇದಕ್ಕೆ ಪ್ರಯತ್ನ ಮುಖ್ಯ. ನಾನು ಕೋವಿಡ್ 19 ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿ ಸಿಎ ಪರೀಕ್ಷೆಗೆ ತಯಾರಾಗುತ್ತಿರೋದನ್ನ ಗಮನಿಸಿದೆ. ನಿಮ್ಮ ಶ್ರದ್ಧೆ ನಿಮ್ಮ ನೋವನ್ನ ಮರೆಸುತ್ತದೆ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!
ಈ ವಿದ್ಯಾರ್ಥಿಯ ಫೋಟೋ ನೋಡಿದ ನೆಟ್ಟಿಗರು ವಿದ್ಯಾರ್ಥಿಯ ಪರಿಶ್ರಮಕ್ಕೆ ಶಹಬ್ಬಾಸ್ ಎಂದಿದ್ದಾರೆ. ಕೊರೊನಾ ಕಾರಣದಿಂದಾಗಿ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನ ಮುಂದೂಡಿದೆ.