alex Certify BIG NEWS: ಶಾಲೆ ಆರಂಭಕ್ಕೆ ಸಿದ್ಧತೆ, ಇನ್ಮುಂದೆ ಶಾಲೆಗೆ ಬರಲು ಸಮ – ಬೆಸ ಯೋಜನೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಾಲೆ ಆರಂಭಕ್ಕೆ ಸಿದ್ಧತೆ, ಇನ್ಮುಂದೆ ಶಾಲೆಗೆ ಬರಲು ಸಮ – ಬೆಸ ಯೋಜನೆ ಜಾರಿ

ನವದೆಹಲಿ: ಲಾಕ್ ಡೌನ್ ಮುಗಿದ ನಂತರ ಶಾಲೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸುತ್ತಿದೆ.

ಮಾನವ ಸಂಪನ್ಮೂಲ ಸಚಿವಾಲಯದ ವತಿಯಿಂದ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಶಾಲೆಗಳಲ್ಲಿ ಸಮ –ಬೆಸ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಶಾಲೆಗಳಲ್ಲಿ ಶೇಕಡ 50 ರಷ್ಟು ವಿದ್ಯಾರ್ಥಿಗಳಿರುವಂತೆ ಗೈಡ್ ಲೈನ್ಸ್ ರೂಪಿಸಲಾಗುತ್ತಿದೆ. ಇದರೊಂದಿಗೆ 12 ವಾಹಿನಿಗಳನ್ನು ಪ್ರಾರಂಭ ಮಾಡಲು ಪ್ರಸ್ತಾಪಿಸಲಾಗಿದೆ.

ವಿದ್ಯಾರ್ಥಿಗಳ ಕಲಿಕೆಗೆ ಅನುವಾಗುವಂತೆ 1 ನೇ ತರಗತಿಯಿಂದ ಪಿಯುಸಿ ವರೆಗೆ 12 ಪ್ರತ್ಯೇಕ ವಾಹಿನಿಗಳನ್ನು ಪ್ರಾರಂಭಿಸಲಾಗುವುದು. ಶಾಲೆಗಳಲ್ಲಿ ಸಮ –ಬೆಸ ಯೋಜನೆ ಜಾರಿಗೆ ತರುವುದರಿಂದ ಮಕ್ಕಳು ಅಂತರ ಕಾಯ್ದುಕೊಳ್ಳಲು, ಸುರಕ್ಷತೆ ಅನುಸರಿಸಲು ಅನುಕೂಲವಾಗುತ್ತದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...