alex Certify ಡಿಜಿಟಲ್​ ವೋಟರ್​ ಐಡಿ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಜಿಟಲ್​ ವೋಟರ್​ ಐಡಿ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಷ್ಟ್ರೀಯ ಮತದಾರರ ದಿನವಾದ ಜನವರಿ 25ರಂದು ರಾಷ್ಟ್ರೀಯ ಚುನಾವಣಾ ಆಯೋಗ ಡಿಜಿಟಲ್​ ವೋಟರ್​ ಐಡಿ (ಎಪಿಕ್​​)ಗೆ ಚಾಲನೆ ನೀಡಿದ್ದು ನಿಮಗೆ ನೆನಪಿದ್ದಿರಬಹುದು.

ಸದ್ಯದಲ್ಲೇ ವಿಧಾನಸಭಾ ಚುನಾವಣೆಯನ್ನ ಎದುರಿಸಲಿರುವ ಆಸ್ಸಾಂ, ಪಾಂಡಿಚೆರಿ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳ ಭಾಗದ ಜನತೆ ಹೊಸ ಡಿಜಿಟಲ್​ ಸೌಲಭ್ಯವನ್ನ ಬಳಸಿಕೊಳ್ಳಬಹುದಾಗಿದೆ.

1. ಡಿಜಿಟಲ್​ ವೋಟರ್​ ಐಡಿ ಎಂದರೇನು..?

ಎಪಿಕ್​ ಅನ್ನೋದು ಮತದಾನದ ಚೀಟಿಯ ಡಿಜಿಟಲ್​ ರೂಪವಾಗಿದ್ದು ಪಿಡಿಎಫ್​​ ರೂಪದಲ್ಲಿ ನೀವು ಮೊಬೈಲ್​ ಇಲ್ಲವೇ ಕಂಪ್ಯೂಟರ್​​ನ ಮೂಲಕ ಪಡೆಯಬಹುದಾಗಿದೆ. ಈ ಮೂಲಕ ನಿಮ್ಮ ವೋಟರ್​​ ಐಡಿ ಪಿಡಿಎಫ್​ ಫಾರ್ಮಾಟ್​ನ ರೂಪದಲ್ಲಿ ನಿಮ್ಮದೇ ಮೊಬೈಲ್​ ಹಾಗೂ ಕಂಪ್ಯೂಟರ್​ನಲ್ಲಿ ಸುರಕ್ಷಿತವಾಗಿ ಇರಲಿದೆ.

2. ಡಿಜಿಟಲ್​ ವೋಟರ್​ ಐಡಿ ಡೌನ್​ಲೋಡ್​ ಮಾಡೋದು ಹೇಗೆ..?

ಡಿಜಿಟಲ್​ ವೋಟರ್​ ಐಡಿಯನ್ನ ನೀವು ವೋಟರ್​ ಪೋರ್ಟಲ್​ ಇಲ್ಲವೇ ಮತದಾರ ಸಹಾಯವಾಣಿ ಮೊಬೈಲ್​ ಅಪ್ಲಿಕೇಶನ್​ ಅಥವಾ ಎನ್​ವಿಎಸ್​ಪಿಯಲ್ಲಿ ಪಡೆಯಬಹುದಾಗಿದೆ.

ವೋಟರ್​ ಪೋರ್ಟಲ್​ : http://voterportal.eci.gov.in/
ಎನ್​ವಿಎಸ್​ಪಿ : https://nvsp.in/

ವೋಟರ್ ಹೆಲ್ಪ್​​ಲೈನ್​ ಮೊಬೈಲ್​ ಅಪ್ಲಿಕೇಶನ್​ :

ಆಂಡ್ರಾಯ್ಡ್​ : https://play.google.com/store/apps/details?id=com.eci.citizen

ಐಓಎಸ್ : https://apps.apple.com/in/app/voter-helpline/id1456535004

ಡಿಜಿಟಲ್​ ವೋಟರ್​ ಐಡಿ ಪಡೆಯಲು ಯಾರು ಅರ್ಹರು..?

ಯಾರ್ಯಾರ ಬಳಿ ಎಪಿಕ್​ ನಂಬರ್​ ಇದೆಯೋ ಅವರೆಲ್ಲ ಡಿಜಿಟಲ್​ ವೋಟರ್ ಐಡಿ ಪಡೆಯಬಹುದಾಗಿದೆ. ನವೆಂಬರ್​ ಹಾಗೂ ಡಿಸೆಂಬರ್​ ತಿಂಗಳಲ್ಲಿ ಮೊಬೈಲ್​ ಸಂಖ್ಯೆ ಸಮೇತ ಫಾರಂ 6 ಅರ್ಜಿ ಸಲ್ಲಿಸಿದವರು ಈಗ ಡಿಜಿಟಲ್​ ವೋಟರ್​ ಐಡಿ ಪಡೆಯಬಹುದಾಗಿದೆ.

ನಾನು ಎಪಿಕ್​ ಕಳೆದುಕೊಂಡುದ್ದೇನೆ., ಇ – ಎಪಿಕ್​​ನ್ನು ಡೌನ್​ಲೋಡ್​ ಮಾಡೋದು ಹೇಗೆ..?

ನಿಮ್ಮ ಹೆಸರನ್ನು http://voterportal.eci.gov.in/ ಅಥವಾ http://electoralsearch.in/ ನಿಂದ ಎಲೆಕ್ಟರಲ್ ರೋಲ್‌ನಲ್ಲಿ ಹುಡುಕಬಹುದು, ನಿಮ್ಮ ಇಪಿಐಸಿ ಸಂಖ್ಯೆಯನ್ನು ಗಮನಿಸಿ ನಂತರ ಇ-ಎಪಿಕ್​​ ಡೌನ್‌ಲೋಡ್ ಮಾಡಿ.

ನನ್ನ ಬಳಿ ಎಪಿಕ್​ ಸಂಖ್ಯೆ ಇಲ್ಲ ಆದರೆ ನನ್ನ ಬಳಿ ಫಾರ್ಮ್ 6 ರೆಫರೆನ್ಸ್​ ಸಂಖ್ಯೆ ಇದೆ. ನಾನು ಇ ಎಪಿಕ್​ ಡೌನ್​ಲೋಡ್​ ಮಾಡಬಹುದೇ..?

ಖಂಡಿತ. ರೆಫರೆನ್ಸ್ ಸಂಖ್ಯೆಯ ಸಹಾಯದಿಂದ ಇ-ಎಪಿಕ್​ ಡೌನ್​ಲೋಡ್​ ಮಾಡಬಹುದು.

ಇ ಎಪಿಕ್​ ಯಾವ ರೂಪದಲ್ಲಿ ಇರುತ್ತದೆ..?

ಇದು ಪಿಡಿಎಫ್​ ಫಾರ್ಮೆಟ್​ನಲ್ಲಿದ್ದು ನೀವು ಇ ಎಪಿಕ್​ನ್ನು ಡೌನ್​ಲೋಡ್​ ಮಾಡಬಹುದಾಗಿದೆ.

ಇ ಎಪಿಕ್​​ನ ಗಾತ್ರ ಎಷ್ಟಿರುತ್ತದೆ..?

250ಕೆಬಿ

ಇ ಎಪಿಕ್​ ಡೌನ್​ಲೋಡ್​ ಮಾಡೋದು ಹೇಗೆ..?

ಕೆಳಗಿನ ಹಂತಗಳನ್ನು ಬಳಸಿಕೊಂಡು ನೀವು ಇ-ಎಪಿಕ್​ನ್ನು http://voterportal.eci.gov.in/ ಅಥವಾ https://nvsp.in/ ಅಥವಾ ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದು.

ವೋರ್ಟಲ್​ ಪೋರ್ಟಲ್​​ಗೆ ಲಾಗಿನ್​ ಮಾಡಿ
ಮೆನು ನೇವಿಗೇಷನ್​​ನಲ್ಲಿ ಡೌನ್​ಲೋಡ್​ ಇ ಎಪಿಕ್​ ಆಯ್ಕೆ ಮಾಡಿ.

ಎಪಿಕ್​ ಸಂಖ್ಯೆ ಅಥವಾ ಫಾರ್ಮ್​ ರೆಫರೆನ್ಸ್ ಸಂಖ್ಯೆ ನಮೂದಿಸಿ.

ನಿಮ್ಮ ನೊಂದಾಯಿತ ಮೊಬೈಲ್​ ಸಂಖ್ಯೆಗೆ ಬರುವ ಒಟಿಪಿಯನ್ನ ನಮೂದಿಸಿ.

ಡೌನ್​ಲೋಡ್​ ಇ ಎಪಿಕ್​ ಮೇಲೆ ಕ್ಲಿಕ್​ ಮಾಡಿ
ಮೊಬೈಲ್​ ಸಂಖ್ಯೆ ನೋಂದಣಿ ಮಾಡದೇ ಇದ್ದಲ್ಲಿ ಕೆವೈಸಿ ಯನ್ನು ಪೂರ್ತಿ ಮಾಡಿ.

ಇ ಎಪಿಕ್​​ನ್ನು ಡೌನ್​ಲೋಡ್​ ಮಾಡಿ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...