alex Certify ಬಾತ್ ರೂಮಿನಲ್ಲಿ ಸಿಕ್ತು ಫ್ಯಾಷನ್ ಡಿಸೈನರ್ ಶವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾತ್ ರೂಮಿನಲ್ಲಿ ಸಿಕ್ತು ಫ್ಯಾಷನ್ ಡಿಸೈನರ್ ಶವ

ಫ್ಯಾಷನ್ ಡಿಸೈನರ್ ಶಾರ್ಬರಿ ದತ್ತಾ ಸಾವನ್ನಪ್ಪಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಕೋಲ್ಕತ್ತಾ ನಿವಾಸದ ಬಾತ್ ರೂಮಿನಲ್ಲಿ ಶಾರ್ಬರಿ ದತ್ತಾ ಶವ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.

ಶಾರ್ಬರಿ, ಕೋಲ್ಕತ್ತಾದ ಬೋರ್ಡ್ ಸ್ಟ್ರೀಟ್‌ನಲ್ಲಿರುವ ತನ್ನ ನಿವಾಸದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಮಾಹಿತಿಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು  ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ವರದಿಯ ನಂತರವೇ ಶಾರ್ಬರಿ ಸಾವಿಗೆ ಕಾರಣ ತಿಳಿಯಲಿದೆ.

ಬೆಳಿಗ್ಗೆಯಿಂದ ಶಾರ್ಬರಿ ಸಂಪರ್ಕಕ್ಕೆ ಸಿಗದ ಕಾರಣ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪಾರ್ಶ್ವವಾಯುವಿನಿಂದ ಅವರು ಸಾವನ್ನಪ್ಪಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಶಾರ್ಬರಿ ನಿಧನದ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶೋಕ ವ್ಯಕ್ತಪಡಿಸುತ್ತಿದ್ದಾರೆ. ಗಾಯಕರಾದ ಪಾರ್ಮಾ ಬ್ಯಾನರ್ಜಿ ಮತ್ತು ಉಜಯಾನಿ ಮುಖರ್ಜಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಶಾರ್ಬರಿ ದತ್ತಾ ಪ್ರಸಿದ್ಧ ಬಂಗಾಳಿ ಕವಿ ಅಜಿತ್ ದತ್ತಾ ಅವರ ಪುತ್ರಿ. ಶಾರ್ಬರಿ ಅನೇಕ ವರ್ಷಗಳ ಕಾಲ ಫ್ಯಾಷನ್ ಡಿಸೈನರ್ ಆಗಿ ಕೆಲಸ ಆಡಿದ್ದಾರೆ. ಅವರು ವರ್ಣರಂಜಿತ ಧೋತಿ ಮತ್ತು ಪಂಜಾಬಿ ಕುರ್ತಾಗಳನ್ನು ಮೊದಲ ಬಾರಿಗೆ ಬಂಗಾಳಿ ಪುರುಷರಿಗಾಗಿ ಡಿಸೈನ್ ಮಾಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...