alex Certify ಭಾರತೀಯ ಸೇನೆಗೆ ಶರಣಾಗುತ್ತಿರುವ ಭಯೋತ್ಪಾದಕನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಸೇನೆಗೆ ಶರಣಾಗುತ್ತಿರುವ ಭಯೋತ್ಪಾದಕನ ವಿಡಿಯೋ ವೈರಲ್

ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ದಮನಗೈಯ್ಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಭದ್ರತಾ ಪಡೆಗಳಿಗೆ ಭಯೋತ್ಪಾದಕನೊಬ್ಬ ಶರಣಾಗಿರುವ ವಿಡಿಯೋವೊಂದನ್ನು ಸೇನೆ ಬಿಡುಗಡೆ ಮಾಡಿದೆ.

ಇಪ್ಪತರ ಹರೆಯದಲ್ಲಿರುವ ಈ ಯುವಕ ಕೆಲ ದಿನಗಳ ಹಿಂದಷ್ಟೇ ಭಯೋತ್ಪಾದನೆಗೆ ನೇರವಾಗಿ ಇಳಿದಿದ್ದ. ಆತನ ಕೈಯಲ್ಲಿದ್ದ AK-47 ಅಸಾಲ್ಟ್‌ ರೈಫಲ್‌ಗಳು ಹಾಗು ಮದ್ದು/ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ ಭದ್ರತಾ ಪಡೆ ಸಿಬ್ಬಂದಿ.

ಭಯೋತ್ಪಾದಕನೊಂದಿಗೆ ಸಂವಹನ ನಡೆಸುತ್ತಿರುವ ಯೋಧರೊಬ್ಬರು, “ನಿನಗೆ ಏನೂ ಆಗುವುದಿಲ್ಲ. ಯಾರೂ ನಿನಗೆ ಏನೂ ಮಾಡುವುದಿಲ್ಲ. ಯಾರೂ ಗುಂಡು ಹಾರಿಸುವುದಿಲ್ಲ. ಸುಮ್ಮನೇ ಶರಣಾಗತನಾಗು” ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಮತ್ತೊಂದು ವಿಡಿಯೋದಲ್ಲಿ, ಭಯೋತ್ಪಾದಕರ ಸಹವಾಸ ಮಾಡಲು ಹೊರಟಿದ್ದ ತನ್ನ ಮಗನನ್ನು ಉಳಿಸಿದ ಕಾರಣಕ್ಕೆ ಆತನ ಅಪ್ಪ ಸೇನೆಗೆ ಧನ್ಯವಾದ ಹೇಳುತ್ತಿರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...