alex Certify ಜೆಸಿಬಿ ಬಳಸಿ ತಾಯಿ ಶವ ಸಾಗಿಸಿದ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಸಿಬಿ ಬಳಸಿ ತಾಯಿ ಶವ ಸಾಗಿಸಿದ ಪುತ್ರ

ಕೊರೊನಾ ಪಾಸಿಟಿವ್ ಆಗಿದ್ದ ಮಗನೊಬ್ಬ ತಾಯಿಯ ಶವವನ್ನು ಜೆಸಿಬಿಯಲ್ಲಿ ಸಾಗಿಸಿದ ಪ್ರಸಂಗ ನಿಜಮಾಬಾದ್ ನಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಗೂ ಕೊರೊನಾ ತಗುಲಿರಬಹುದು ಎಂಬ ಭಯದಿಂದ ಯಾರೂ ಸಹ ಅವರ ಮನೆ ಬಳಿ ಸುಳಿಯಲಿಲ್ಲ. ಯಾರೊಬ್ಬರೂ ಅಂತಿಮ ದರ್ಶನಕ್ಕೆ ಬರಲಿಲ್ಲ. ಪರಿಣಾಮ ಪಿಪಿಇ ಕಿಟ್ ಧರಿಸಿದ ಕೊರೊನಾ ವೈರಸ್ ತಗುಲಿಸಿಕೊಂಡಿದ್ದ ಆಕೆಯ ಪುತ್ರ, ತಾಯಿಯ ದೇಹವನ್ನು ಜೆಸಿಬಿಯಲ್ಲಿ ಇರಿಸಿ ಶವಾಗಾರಕ್ಕೆ ಕೊಂಡೊಯ್ದನು.

ನಾಲ್ಕು ದಿನಗಳ ಹಿಂದಷ್ಟೇ ಇಬ್ಬರು ಟೆಸ್ಟ್ ಗೆ ಒಳಗಾಗಿದ್ದು, ಆಕೆಗೆ ನೆಗೆಟಿವ್ ಫಲಿತಾಂಶ ಬಂದಿತ್ತು‌. ನಂತರ ಮನೆಯಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಮೃತದೇಹವನ್ನು ಜೆಸಿಬಿಯಲ್ಲಿಟ್ಟು ಕೊಂಡೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...