alex Certify ನೋ ಫೋನ್​ ಪೇ…..ಗೂಗಲ್​ ಪೇ…..ಇದು ಡೈರೆಕ್ಟ್​ ಪಾಕೆಟ್​ ಪೇ..! ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಅಧಿಕಾರಿ ಲಂಚಾವತಾರದ ವಿಡಿಯೋ ವೈರಲ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋ ಫೋನ್​ ಪೇ…..ಗೂಗಲ್​ ಪೇ…..ಇದು ಡೈರೆಕ್ಟ್​ ಪಾಕೆಟ್​ ಪೇ..! ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಅಧಿಕಾರಿ ಲಂಚಾವತಾರದ ವಿಡಿಯೋ ವೈರಲ್​..!

ಟ್ರಾಫಿಕ್​​ ಇಲಾಖೆ ಮಹಿಳಾ ಅಧಿಕಾರಿ ಮತ್ತೊಬ್ಬ ಮಹಿಳೆಯಿಂದ ಲಂಚ ತೆಗೆದುಕೊಳ್ಳುತ್ತಿರುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋದಲ್ಲಿ ಸ್ಕೂಟಿಯ ಮೇಲೆ ಮಹಿಳೆಯೊಬ್ಬರು ಕುಳಿತಿದ್ದರೆ ಇನ್ನೊಬ್ಬ ಮಹಿಳೆ ಟ್ರಾಫಿಕ್​ ಪೊಲೀಸ್​ ಜೊತೆ ಮಾತನಾಡುತ್ತಿದ್ದಾಳೆ. ಆ ಮಹಿಳೆಯನ್ನ ಹತ್ತಿರಕ್ಕೆ ಕರೆದ ಮಹಿಳಾ ಪೊಲೀಸ್​ ಪಿಸು ಮಾತುಗಳನ್ನ ಆಡಿದ್ದಾರೆ. ಕೂಡಲೇ ಮಹಿಳೆ ಹಣವನ್ನ ತೆಗೆದು ಆಕೆಯ ಪ್ಯಾಂಟ್​ ಪ್ಯಾಕೆಟ್​ನೊಳಕ್ಕೆ ಹಾಕಿ ಸ್ಕೂಟಿ ಸಮೇತ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ವಿಡಿಯೋ ಇದೀಗ ಟ್ವಿಟರ್​, ವಾಟ್ಸಾಪ್​, ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಫೋನ್​ ಪೇಯೂ ಅಲ್ಲ, ಗೂಗಲ್​ ಪೇಯೂ ಅಲ್ಲ. ಬದಲಾಗಿ ನೇರವಾಗಿ ಪಾಕೆಟ್​ ಪೇ ಎಂದು ವ್ಯಂಗ್ಯವಾಡಿದ್ದಾರೆ.

— Jaane bhi do Yaro (@mat_jane_de_yar) December 18, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...