alex Certify ಗುಡ್​ ನ್ಯೂಸ್​: ಈ ರಾಜ್ಯದಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ರದ್ದು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್​ ನ್ಯೂಸ್​: ಈ ರಾಜ್ಯದಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ರದ್ದು..!

ಮಾಧ್ಯಮಿಕ ಶಿಕ್ಷಣ ಮಂಡಳಿಯ ಶಾಲೆಗಳ 1ರಿಂದ 8ನೇ ತರಗತಿಯ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯನ್ನ ನಡೆಸದೇ ಅಸೆಸ್​ಮೆಂಟ್​ ಆಧಾರದಲ್ಲಿ ಮುಂದಿನ ತರಗತಿಗೆ ಬಡ್ತಿ ನೀಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಕೊರೊನಾ ಕಾರಣದಿಂದಾಗಿ 2020-21ಸೇ ಸಾಲಿನ ಶೈಕ್ಷಣಿಕ ವರ್ಷದ 10 ತಿಂಗಳುಗಳ ಕಾಲ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯವಾಗದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ 9 ಹಾಗೂ 11ನೇ ತರಗತಿ ಮಕ್ಕಳಿಗೆ ವೇಳಾಪಟ್ಟಿಯಂತೆ ಪರೀಕ್ಷೆ ನಡೆಯಲಿದೆ.
ಮೂಲ ಶಿಕ್ಷಣ ಮಂಡಳಿಯ 1 ಲಕ್ಷ 59 ಸಾವಿರ ವಿದ್ಯಾಲಯಗಳಲ್ಲಿ ಸರಿ ಸುಮಾರಿ 1 ಕೋಟಿ 60 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ಮಾರ್ಚ್​ನಿಂದ ಶಾಲೆಗಳನ್ನ ಬಂದ್​ ಮಾಡಲಾಗಿತ್ತು. ಅಲ್ಲದೇ 2019-20ನೇ ಸಾಲಿನಲ್ಲೂ ಉತ್ತರ ಪ್ರದೇಶ ಸರ್ಕಾರ ಪರೀಕ್ಷೆ ಇಲ್ಲದೇ ಈ ಮಕ್ಕಳನ್ನ ಮುಂದಿನ ತರಗತಿಗೆ ಪಾಸ್​ ಮಾಡಿತ್ತು.
ಜುಲೈ ತಿಂಗಳಿನಿಂದ ಮಕ್ಕಳಿಗೆ ಆನ್​ಲೈನ್​ ಶಿಕ್ಷಣ ಆರಂಭಿಸಲಾಗಿತ್ತು, ಆದರೆ ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳ ಸಂಖ್ಯೆಯೇ ಹೆಚ್ಚಿರುವ ಕಾರಣ ಆನ್​ಲೈನ್​ ತರಗತಿ ಸಾಧ್ಯವಾಗಿಲ್ಲ. 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಫೆಬ್ರವರಿಯಿಂದ ತರಗತಿಗಳು ಆರಂಭವಾಗಿದೆ.  1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಶಾಲೆಗಳು ತೆರೆದಿವೆ.
ಪ್ರಾಥಮಿಕ ಶಿಕ್ಷಣ ವಿಭಾಗದ ಎಸಿಎಸ್​ ರೇಣುಕಾ ಕುಮಾರ್​ ಈ ವಿಚಾರವಾಗಿ ಮಾತನಾಡಿ ಕೌನ್ಸಿಲ್​ ಶಾಲೆಗಳಲ್ಲಿ ಈ ವರ್ಷವೂ ಪರೀಕ್ಷೆ ನಡೆಯೋದಿಲ್ಲ. ನಾವು 100 ದಿನಗಳ ಪ್ರೇರಣಾ ಜ್ಞಾನೋತ್ಸವ ಎಂಬ ಕಾರ್ಯಕ್ರಮವನ್ನ ನಡೆಸುತ್ತಿದ್ದೇವೆ. ಇದರ ಅಡಿಯಲ್ಲಿ ಮಕ್ಕಳಿಗೆ ಅಸೆಸ್​ಮೆಂಟ್​ ಮೂಲಕ ಮುಂದಿನ ತರಗತಿಗೆ ಬಡ್ತಿ ನೀಡ್ತೇವೆ ಎಂಧು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...