alex Certify ಬೇಸಿಗೆ ಕಾಲದಲ್ಲೂ ಹಿಮ ಮಳೆಗೆ ಸಾಕ್ಷಿಯಾಯ್ತು ಶಿಮ್ಲಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆ ಕಾಲದಲ್ಲೂ ಹಿಮ ಮಳೆಗೆ ಸಾಕ್ಷಿಯಾಯ್ತು ಶಿಮ್ಲಾ..!

ಹಿಮಾಲಯದ ಶ್ರೇಣಿಯಲ್ಲಿ ಏಪ್ರಿಲ್​ ತಿಂಗಳಲ್ಲಿ ಹಿಮಮಳೆಯಾಗುತ್ತೆ ಎಂಬ ಸುದ್ದಿಯನ್ನ ಈ ಹಿಂದೆ ಕೇಳಿದ್ದೀರಾ..? ಆದರೆ ಹಿಮಾಚಲ ಪ್ರದೇಶ ಶುಕ್ರವಾರ ಮುಂಜಾನೆ ಹಿಮಮಳೆಗೆ ಸಾಕ್ಷಿಯಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಸ್ನೋಫಾಲ್​ನ ಅದ್ಭುತ ಫೋಟೋಗಳು ಹಾಗೂ ವಿಡಿಯೋಗಳು ಶೇರ್​ ಆಗ್ತಿವೆ. ಶುಕ್ರವಾರ ಮುಂಜಾನೆ ಶಿಮ್ಲಾ ಜಿಲ್ಲೆಯ ಮಂಧೋಲ್​ ಗ್ರಾಮದಲ್ಲಿ ಹಿಮಮಳೆ ಉಂಟಾಗಿದೆ.

ಶಿಮ್ಲಾ ಪಟ್ಟಣವು 83 ಮಿಲಿಮೀಟರ್ ಮಳೆಯನ್ನ ವರದಿ ಮಾಡಿದೆ. ಏಪ್ರಿಲ್​ ತಿಂಗಳಲ್ಲಿ ಸುರಿದ ಎರಡನೇ ಅತ್ಯಧಿಕ ಪ್ರಮಾಣದ ಮಳೆ ಇದಾಗಿದೆ. ಈ ಹಿಂದೆ 1979ರಲ್ಲಿ ಶಿಮ್ಲಾದಲ್ಲಿ 24 ಗಂಟೆಗಳ ಕಾಲ ಮಳೆಯಾಗಿತ್ತು.

ಇದಾದ ಬಳಿಕ ಈ ಬಾರಿ ಶಿಮ್ಲಾದಲ್ಲಿ ಏಪ್ರಿಲ್​ ತಿಂಗಳ ಅತ್ಯಧಿಕ ಪ್ರಮಾಣದ ಮಳೆಯಾಗಿದೆ ಎಂದು ಶಿಮ್ಲಾ ಹವಾಮಾನ ಇಲಾಖೆ ಕೇಂದ್ರ ನಿರ್ದೇಶಕರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಿಮಮಳೆಯ ಅಭೂತಪೂರ್ವ ದೃಶ್ಯಗಳನ್ನ ಶೇರ್​ ಮಾಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...