alex Certify ಸಾಮಾಜಿಕ ಅಂತರದೊಂದಿಗೆ ಇಲೆಕ್ಟ್ರಿಕ್ ಬೈಕ್ ಸಂಚಾರಕ್ಕೆ ಸಿದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಅಂತರದೊಂದಿಗೆ ಇಲೆಕ್ಟ್ರಿಕ್ ಬೈಕ್ ಸಂಚಾರಕ್ಕೆ ಸಿದ್ದ

ಅಗರ್ತಲಾ: ಕರೋನಾ ವೈರಸ್ ನಿಂದ ಬಚಾವಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ
ತ್ರಿಪುರಾದ ವ್ಯಕ್ತಿಯೊಬ್ಬರು ವಿಶೇಷ ಬೈಕ್ ನಿರ್ಮಿಸಿದ್ದಾರೆ. ತ್ರಿಪುರಾ ರಾಜ್ಯದ ಅಗರ್ತಲಾದ ಪಾರ್ಥ ಸಹಾ ಎಂಬ 39 ವರ್ಷದ ವ್ಯಕ್ತಿ ಹಳೆಯ ಬೈಕ್ ಒಂದನ್ನು ಪರಿವರ್ತಿಸಿದ್ದು, ಚಾಲಕ ಹಾಗೂ ಸಹ ಸವಾರ 1 ಮೀಟರ್ ಅಂತರದಲ್ಲಿ ಕುಳಿತುಕೊಳ್ಳುವ
ವ್ಯವಸ್ಥೆ ಮಾಡಿದ್ದಾರೆ.

ತಮ್ಮ ಅಲ್ಪ ಉಳಿತಾಯ ಬಳಸಿ ಸ್ಕ್ರಾಪ್ ಅಂಗಡಿಯವನಿಂದ‌ ಹಳೆಯ ಬೈಕ್ ಪಡೆದ ಸಹಾ ಅದರ ಇಂಜಿನ್ ಬಿಚ್ಚಿ ರಿಪೇರಿ ಮಾಡಿದ್ದಾರೆ. ನಂತರ ಬಿಡಿ ಭಾಗಗಳನ್ನು ಕೂರಿಸಿ ಎರಡು ಜನ ಕೂರುವ ಆಸನ ವ್ಯವಸ್ಥೆ ಮಾಡಿದ್ದಾರೆ. “ಈಗ ನಾನು ನನ್ನ 8 ವರ್ಷದ ಮಗಳನ್ನು ಸಾಮಾಜಿಕ ಅಂತರ
ಕಾಯ್ದುಕೊಂಡೂ ಬೈಕ್ ಮೇಲೆ ಶಾಲೆಗೆ ಕರೆದೊಯ್ಯಬಲ್ಲೆ” ಎಂದಿದ್ದಾರೆ ಸಹಾ.

ಬೈಕ್ ಬ್ಯಾಟರಿ ಶಕ್ತಿಯಿಂದ ಪ್ರತಿ ಘಂಟೆಗೆ 40 ಕಿಮೀ ವೇಗದಲ್ಲಿ ಚಲಿಸಬಲ್ಲದು. 3 ತಾಸು ಪೂರ್ಣ ಚಾರ್ಜ್ ಮಾಡಿದರೆ ಒಮ್ಮೆ 80 ಕಿ.ಮೀ.ವರೆಗೆ ಚಲಿಸಬಲ್ಲದು. ಒಮ್ಮೆ ಪೂರ್ಣ ಬೈಕ್ ಚಾರ್ಜ್ ಮಾಡಲು 10 ರೂ. ಖರ್ಚಾಗುತ್ತದೆ. ಟಿವಿ ರಿಪೇರಿ ಅಂಗಡಿ ನಡೆಸುತ್ತಿರುವ ಸಹಾ ಸಂಶೋಧನೆಗೆ ತ್ರಿಪುರಾ ಮುಖ್ಯಮಂತ್ರಿ ಬಿಪಾಲ್ ಕುಮಾರ್ ದೇಬ್ ಅಭಿನಂದನೆ  ಸಲ್ಲಿಸಿದ್ದಾರೆ. “ನೆಸಸಿಟಿ ಈಸ್ ದ ಮದರ್ ಆಫ್ ಇನ್ವೆಂನ್ಶನ್” ಎಂಬ ಟ್ಯಾಗ್ಲೈನ್ನೊಂದಿಗೆ ಸಹಾ ಅವರ ಸಾಧನೆಯ ವಿಡಿಯೊ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...