alex Certify ಬಾಂಗ್ಲಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಧರಿಸಲಿದ್ದಾರೆ ವಿಶೇಷ ವಿನ್ಯಾಸದ ಜಾಕೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಗ್ಲಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಧರಿಸಲಿದ್ದಾರೆ ವಿಶೇಷ ವಿನ್ಯಾಸದ ಜಾಕೆಟ್

ಖಾದಿಯಿಂದ ತಯಾರಿಸಲಾದ ಮುಜೀಬ್​ ಜಾಕೆಟ್​ ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ವಾರದ 2 ದಿನಗಳ ಢಾಕಾ ಪ್ರವಾಸದ ಆಕರ್ಷಣೆಯ ಕೇಂದ್ರವಾಗಿರಲಿದೆ. ಬಾಂಗ್ಲಾದೇಶದ ಫಾದರ್​ ಆಫ್​ ನೇಷನ್​ ಶೇಖ್​​ ಮುಜೀಬುರ್​​ ರಹಮಾನ್​ರ ಸಿಗ್ನೇಚರ್​ ಸ್ಟೈಲ್​ ಆಗಿದ್ದ ಮುಜೀಬ್​ ಜಾಕೆಟ್​ನ್ನು ಪ್ರಧಾನಿ ತೊಡಲಿದ್ದಾರೆ.

ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗ, ಇದನ್ನು ಡಿಸೈನ್​ ಮಾಡಿಕೊಟ್ಟಿದೆ. ಕೆವಿಐಸಿಯ ಅಧ್ಯಕ್ಷ ವಿನಯ್​ ಕುಮಾರ್​ ಸಕ್ಸೇನಾ ಈ ವಿಚಾರವಾಗಿ ಮಾತನಾಡಿ ಮಾರ್ಚ್ 26 ಹಾಗೂ 27ರಂದು ಪ್ರಧಾನಿ ಮೋದಿ ಢಾಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಈ ವಿಶೇಷ ವಿನ್ಯಾಸದ ಜಾಕೆಟ್‌ ಧರಿಸಲಿದ್ದಾರೆ ಎಂದರು.

ವಿಶೇಷ ರೂಪದಲ್ಲಿ ಡಿಸೈನ್​ ಮಾಡಲಾದ ಮುಜೀಬ್​ ಜಾಕೆಟ್​​ ಉತ್ತಮ ಗುಣಮಟ್ಟದ ಖಾದಿ ಬಟ್ಟೆಯಿಂದ ಮಾಡಲಾಗಿದೆ. ಕಪ್ಪು ಬಣ್ಣದ ಮುಜೀಬ್​ ಜಾಕೆಟ್​ನಲ್ಲಿ ಆರು ಬಟನ್​, 2 ಜೇಬು ಹಾಗೂ ಎಡಭಾಗದಲ್ಲಿ ಮುಂಭಾಗದ ಪಾಕೆಟ್​ ಇದ್ದು ಇದನ್ನ ವಿಶೇಷ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಮುಜೀಬ್​ ಜಾಕೆಟ್​​ ಬಾಂಗ್ಲಾದೇಶದಲ್ಲಿ ಐತಿಹಾಸಿಕ ರೂಪದಲ್ಲಿ ಮಹತ್ವಪೂರ್ಣ ಸ್ಥಾನವನ್ನ ಪಡೆದಿದೆ. ಪ್ರಧಾನ ಮಂತ್ರಿ ಮೋದಿಯವರ ಬಾಂಗ್ಲಾದೇಶದ ಪ್ರವಾಸ ಪ್ರಯುಕ್ತ ಈ ವಿಶೇಷ ಉಡುಪನ್ನ ತಯಾರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...