alex Certify 190ಕ್ಕೂ ಅಧಿಕ ಬೀದಿನಾಯಿಗಳಿಗೆ ನಿತ್ಯ ಚಿಕನ್​ ಬಿರಿಯಾನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

190ಕ್ಕೂ ಅಧಿಕ ಬೀದಿನಾಯಿಗಳಿಗೆ ನಿತ್ಯ ಚಿಕನ್​ ಬಿರಿಯಾನಿ…!

ಕೊರೊನಾ ಎರಡನೆ ಅಲೆಯಿಂದಾಗಿ ಇಡೀ ದೇಶವೇ ಜೀವನ ನಿರ್ವಹಣೆಗಾಗಿ ಹೋರಾಡುತ್ತಿದೆ. ಒಂದೊತ್ತಿನ ಊಟಕ್ಕೂ ಎಷ್ಟೋ ಕುಟುಂಬಗಳಿಗೆ ಸಂಕಷ್ಟವಿದೆ. ಈ ನಡುವೆ ಬೀದಿ ನಾಯಿಗಳ ಪಾಡಂತೂ ಕೇಳೋದೇ ಬೇಡ. ಮಹಾರಾಷ್ಟ್ರದ ನಾಗ್ಪುರದಲ್ಲಿ ಮಹಾನುಭಾವರೊಬ್ಬರು 190 ಬೀದಿನಾಯಿಗಳಿಗೆ ನಿತ್ಯ ಚಿಕನ್​ ಬಿರಿಯಾನಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಂಜಿತ್​​ ನಾತ್​ ನಿತ್ಯ 40 ಕೆಜಿ ಚಿಕನ್​ ಬಿರಿಯಾನಿಯನ್ನ ತಯಾರು ಮಾಡ್ತಾರೆ. ಕೊರೊನಾ ವೈರಸ್​ ಸಾಂಕ್ರಾಮಿಕ ಆರಂಭವಾದಾಗಿನಿಂದ ರಂಜಿತ್​ 190ಕ್ಕೂ ಅಧಿಕ ಬೀದಿ ನಾಯಿಗಳಿಗೆ ಊಟವನ್ನ ನೀಡುತ್ತಾ ಬಂದಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ರಂಜಿತ್, ನಾನು ಬುಧವಾರ, ರವಿವಾರ ಹಾಗೂ ಶುಕ್ರವಾರ 30-40 ಕೆಜಿ ಬಿರಿಯಾನಿ ತಯಾರು ಮಾಡೋದ್ರಲ್ಲೇ ಬ್ಯುಸಿಯಾಗಿಬಿಡ್ತೇನೆ. ಈ ಶ್ವಾನಗಳೆಲ್ಲ ನನ್ನ ಮಕ್ಕಳಂತೆ ಭಾಸವಾಗುತ್ತೆ. ನಾನು ಜೀವಂತ ಇರುವವರೆಗೂ ಈ ಕೆಲಸವನ್ನ ಮಾಡುತ್ತೇನೆ. ಈ ಕೆಲಸ ನನಗೆ ಖುಷಿ ಕೊಡ್ತಿದೆ ಎಂದು ಹೇಳಿದ್ರು.

ಮಧ್ಯಾಹ್ನದ ವೇಳೆಗೆ ಚಿಕನ್​ ಬಿರಿಯಾನಿ ಮಾಡಲು ಆರಂಭಿಸುವ ರಂಜಿತ್​ ಸಂಜೆ 5 ಗಂಟೆ ಸುಮಾರಿಗೆ ಶ್ವಾನಗಳಿಗೆ ಅದನ್ನ ಉಣಬಡಿಸುತ್ತಾರೆ. ಈ ಚಿಕನ್​ ಬಿರಿಯಾನಿಯಲ್ಲಿ ಮಾಂಸಕ್ಕಿಂತ ಮೂಳೆಗಳು ಹೆಚ್ಚಾಗಿ ಇರುತ್ತದೆ. ಮೂಳೆಯು ಕಡಿಮೆ ದರಕ್ಕೆ ಸಿಗೋದ್ರಿಂದ ಅದರಲ್ಲೇ ರಂಜಿತ್​ ಚಿಕನ್​ ಬಿರಿಯಾನಿ ತಯಾರಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...