alex Certify ಟ್ರೋಲಿಗರಿಗೆ ಹಬ್ಬದಂತಾಗಿದೆ ಮಿಂತ್ರಾ ಲೋಗೋ ವಿವಾದ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೋಲಿಗರಿಗೆ ಹಬ್ಬದಂತಾಗಿದೆ ಮಿಂತ್ರಾ ಲೋಗೋ ವಿವಾದ..!

ಆನ್​ಲೈನ್ ಮಾರುಕಟ್ಟೆಯ ಪ್ರತಿಷ್ಠಿತ ಕಂಪನಿ ಮಿಂತ್ರಾ ವಿವಾದದ ಬಳಿಕ ತನ್ನ ಲೋಗೋವನ್ನ ಬದಲಾವಣೆ ಮಾಡಿದೆ.

ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತೆ ನಾಜ್​ ಪಟೇಲ್​ ಎಂಬವರು ಕಳೆದ ವರ್ಷ ಡಿಸೆಂಬರ್​ನಲ್ಲಿ ಮಿಂತ್ರಾ ಲೋಗೋದಲ್ಲಿ ಹೆಣ್ಣುಮಕ್ಕಳನ್ನ ಅಸಹ್ಯವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದರು.

ಈ ಸಂಬಂಧ ಮುಂಬೈ ಸೈಬರ್​ ಕ್ರೈಂ ವಿಭಾಗ ಮಿಂತ್ರಾಗೆ ಇ ಮೇಲ್​ ಮಾಡಿತ್ತು. ಈ ಇಮೇಲ್​ಗೆ ಸಕಾರಾತ್ಮಕವಾಗೇ ಸ್ಪಂದಿಸಿದ ಮಿಂತ್ರಾ ತನ್ನ ಲೋಗೋದಲ್ಲಿ ಸಣ್ಣ ಬದಲಾವಣೆ ಮಾಡಿದೆ. ಆದರೆ ಈ ವಿಚಾರವನ್ನ ನೆಟ್ಟಿಗರು ಇಷ್ಟಕ್ಕೇ ಬಿಟ್ಟಿಲ್ಲ. ಈ ಸುದ್ದಿ ಟ್ರೆಂಡ್​ ಆದಾಗಿನಿಂದ ಟ್ರೋಲ್​ಗಳ ಮೇಲೆ ಟ್ರೋಲ್​ ಮಾಡುತ್ತಿದ್ದಾರೆ.

ಅನೇಕರು ಸಾಮಾಜಿಕ ಕಾರ್ಯಕರ್ತೆ ಎಲ್ಲರ ಗಮನವನ್ನ ಪಡೆಯಬೇಕು ಅಂತಾ ಈ ನಾಟಕ ಮಾಡಿದ್ದಾಳೆ ಎಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೇ ಸ್ವಿಗ್ಗಿ ಹಾಗೂ ಜೊಮೆಟೋ ಕೂಡ ಈ ಟ್ರೋಲ್​ ಹಬ್ಬದಲ್ಲಿ ಭಾಗಿಯಾಗಿವೆ,

— zomato (@zomato) January 31, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...