alex Certify ಖಾಸಗಿ ಕಾರು ಪ್ರಯಾಣಿಕರಿಗೆ ಮಾಸ್ಕ್​ ವಿನಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಕಾರು ಪ್ರಯಾಣಿಕರಿಗೆ ಮಾಸ್ಕ್​ ವಿನಾಯಿತಿ

ಖಾಸಗಿ ಕಾರಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾಸ್ಕ್​ ಧರಿಸದೇ ಇದ್ದರೂ ದಂಡ ವಿಧಿಸದಂತೆ ಮುಂಬೈ ಮುನ್ಸಿಪಾಲ್​ ಕಮಿಷನರ್​ ಸೂಚನೆ ನೀಡಿದ್ದಾರೆ.

ಆದರೆ ಈ ವಿನಾಯಿತಿ ಕೇವಲ ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಇರಲಿದೆ. ಆದರೆ ಸಾರ್ವಜನಿಕ ವಾಹನಗಳಲ್ಲಿ ತೆರಳುವ ಪ್ರಯಾಣಿಕರಿಗೆ ಮಾತ್ರ ಫೇಸ್​ ಮಾಸ್ಕ್​ ಧರಿಸೋದು ಕಡ್ಡಾಯವಾಗಿರಲಿದೆ. ಎಲ್ಲಾ ಮಾರ್ಷಲ್​​ಗಳು ಈ ಸೂಚನೆಯನ್ನ ಅನುಸರಿಸಬೇಕು ಎಂದು ಬಿಎಂಸಿ ಹೇಳಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಬಿಎಂಸಿ ಮುಂಬೈನಲ್ಲಿ ಕಳೆದ ವರ್ಷದ ಏಪ್ರಿಲ್​​ನಿಂದ ಮಾಸ್ಕ್​ ಧರಿಸೋದನ್ನ ಕಡ್ಡಾಯಗೊಳಿಸಿದೆ. ಏಪ್ರಿಲ್​​ನಿಂದ ನವೆಂಬರ್​ 28 ರವರೆಗೆ ಮಾಸ್ಕ್​ ಧರಿಸದ ಕಾರಣಕ್ಕೆ ಸಾರ್ವಜನಿಕರಿಂದ ಸಂಗ್ರಹಿಸಲಾದ ದಂಡದ ಮೊತ್ತ 63.39 ಲಕ್ಷ ರೂಪಾಯಿ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...