alex Certify Shocking: ʼಕೊರೊನಾʼ ಚಿಕಿತ್ಸೆಗೆ ಸಹಾಯ ಕೋರಿ ಮೊರೆಯಿಟ್ಟ ಯುವತಿಗೆ ಖಾಸಗಿ ಅಂಗದ ಪೋಟೋ ಕಳಿಸಿ ವಿಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ʼಕೊರೊನಾʼ ಚಿಕಿತ್ಸೆಗೆ ಸಹಾಯ ಕೋರಿ ಮೊರೆಯಿಟ್ಟ ಯುವತಿಗೆ ಖಾಸಗಿ ಅಂಗದ ಪೋಟೋ ಕಳಿಸಿ ವಿಕೃತಿ

ದೇಶದಲ್ಲಿ ಕೊರೊನಾ ಚಿಕಿತ್ಸೆಗೆ ವೆಂಟಿಲೇಟರ್​, ಪ್ಲಾಸ್ಮಾ ಹಾಗೂ ಆಮ್ಲಜನಕದ ಕೊರತೆ ಉಂಟಾಗ್ತಾ ಇರೋದ್ರಿಂದ ಸಾಕಷ್ಟು ಮಂದಿ ಸಹಾಯಕ್ಕಾಗಿ ಸೋಶಿಯಲ್​ ಮೀಡಿಯಾದ ಮೊರೆ ಹೋಗುತ್ತಿದ್ದಾರೆ.

ಇದೇ ರೀತಿ ಕುಟುಂಬಸ್ಥರಿಗೆ ವೆಂಟಿಲೇಟರ್​ ಸೌಲಭ್ಯ ಹುಡುಕುತ್ತಿದ್ದ ಮಹಿಳೆ ಟ್ವಿಟರ್​ನಲ್ಲಿ ತಮ್ಮ ಮೊಬೈಲ್​ ಸಂಖ್ಯೆಯನ್ನ ಶೇರ್​ ಮಾಡಿದ್ದರು. ಇದೀಗ ಆಕೆಯ ಮೊಬೈಲ್​ ನಂಬರ್​ಗೆ ಅಶ್ಲೀಲ ಫೋಟೋಗಳನ್ನ ಕಳುಹಿಸಲಾಗುತ್ತಿದೆಯಂತೆ.

ಕಳೆದ ವಾರ ಮುಂಬೈ ನಿವಾಸಿ ಶಾಶ್ವತಿ ಶಿವ ಎಂಬವರ ಕುಟುಂಬಸ್ಥರು ಕೋವಿಡ್​ ಸೋಂಕಿಗೆ ಒಳಗಾಗಿದ್ದರು. ಕುಟುಂಬಸ್ಥರಿಗೆ ಯಾವುದೇ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ ಸೌಲಭ್ಯ ದೊರೆಯದ ಕಾರಣ ಅವರು ಸಹಾಯಕ್ಕಾಗಿ ಸೋಶಿಯಲ್ ಮೀಡಿಯಾದ ಮೊರೆ ಹೋಗಿದ್ದರು.

ನಾನು ಯಾವಾಗಲು ಸೋಶಿಯಲ್​ ಮೀಡಿಯಾದ ಶಕ್ತಿಯ ಬಗ್ಗೆ ನಂಬಿಕೆ ಇಟ್ಟಿದ್ದೆ. ಹೀಗಾಗಿ ನಾನು ಸೋಶಿಯಲ್​ ಮೀಡಿಯಾದಲ್ಲಿ ವೆಂಟಿಲೇಟರ್​ ಸೌಲಭ್ಯದ ಬಗ್ಗೆ ಮಾಹಿತಿಯನ್ನ ಕೇಳಿದ್ದೆ. ಈ ಟ್ವೀಟ್​ ಮಾಡಿದ ಆರು ಗಂಟೆಯಲ್ಲಿ ನನಗೆ ವೆಂಟಿಲೇಟರ್ ಸೌಲಭ್ಯ ಸಿಕ್ಕಿತ್ತು ಎಂದು ಶಿವಾ ಬರೆದುಕೊಂಡಿದ್ದಾರೆ. ಆದರೆ ಕತೆ ಇಲ್ಲಿಗೆ ಮುಕ್ತಾಯವಾಗಿಲ್ಲ.

ಕುಟುಂಬಸ್ಥರ ಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದರಿಂದ ಆಕೆಗೆ ಪ್ಲಾಸ್ಮಾ ದಾನಿಗಳನ್ನ ಹುಡುಕುವ ಪರಿಸ್ಥಿತಿ ಎದುರಾಯ್ತು. ಹೀಗಾಗಿ ಶಾಶ್ವತಿ ಮತ್ತೊಮ್ಮೆ ಸೋಶಿಯಲ್​ ಮೀಡಿಯಾದಲ್ಲಿ ಬೇಡಿಕೆಯನ್ನ ಇಟ್ಟರು. ಈ ಟ್ವೀಟ್​ನ್ನು ಅನೇಕರು ಶೇರ್​ ಮಾಡಿದ್ದಾರೆ. ಇದಾದ ಬಳಿಕ ಶಾಶ್ವತಿ ಮೊಬೈಲ್​ಗೆ ಅನೇಕ ಕರೆಗಳು ಬರಲು ಆರಂಭಿಸಿದವು. ಆದರೆ ಅವರಿಗೆ ಪ್ಲಾಸ್ಮಾ ನೀಡುವ ಇರಾದೆ ಇರಲಿಲ್ಲ. ಬದಲಾಗಿ ಶಾಶ್ವತಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾರೆ.

ನಾನು ಸಿಂಗಲ್​ ಆಗಿದ್ದೇನಾ..? ನನ್ನ ಪ್ರೊಫೈಲ್​ ಫೋಟೋವನ್ನ ಹೊಗೋಳೋದು, ಫೋನ್​ನಲ್ಲೇ ಕಿಸ್​ ಮಾಡೋದು ಹೀಗೆ ನನಗೆ ಕಿರುಕುಳ ಶುರುವಾಗುತ್ತಾ ಹೋಯ್ತು ಅಂತಾ ಶಾಶ್ವತಿ ಹೇಳಿದ್ದಾರೆ. ಇದು ಸಾಲದು ಎಂಬಂತೆ ಆಕೆಗೆ ವಿಡಿಯೋ ಕಾಲ್​ ಮಾಡಿದ್ದಾರೆ ಮಾತ್ರವಲ್ಲದೇ ಕೆಲವರಂತೂ ಖಾಸಗಿ ಅಂಗದ ಫೋಟೋಗಳನ್ನೆಲ್ಲ ಈಕೆಗೆ ಕಳುಹಿಸಿದ್ದಾರಂತೆ.

ಈ ಬಗ್ಗೆ ಟ್ವಿಟರ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಶಾಶ್ವತಿ ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಕೆಲ ಪುರುಷರು ಈ ಕೆಲಸ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಮಾತ್ರವಲ್ಲದೇ ಯಾವುದೇ ಕಾರಣಕ್ಕೂ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ನಂಬರ್ ಶೇರ್ ಮಾಡಲೇಬೇಡಿ ಎಂದು ಕಿವಿಮಾತನ್ನ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...