alex Certify ಮೋಜಿಗಾಗಿ ಕಂಪ್ಯೂಟರ್ ಹ್ಯಾಕ್ ಮಾಡಿದ ಅಪ್ರಾಪ್ತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಜಿಗಾಗಿ ಕಂಪ್ಯೂಟರ್ ಹ್ಯಾಕ್ ಮಾಡಿದ ಅಪ್ರಾಪ್ತ..!

ಕಾಫಿ ಶಾಪ್​​ನ ಕಂಪ್ಯೂಟರ್​ನ್ನು ಹ್ಯಾಕ್​ ಮಾಡಿ ಕಾಫಿ ಶಾಪ್​ ಬ್ಯಾಂಕ್​ ಖಾತೆಯಿಂದ ಮೋಜಿಗಾಗಿ ಸ್ನೇಹಿತನ ಗಿಫ್ಟ್ ಕಾರ್ಡ್​ಗೆ ಹಣ ವರ್ಗಾವಣೆ ಮಾಡಿದ 17 ವರ್ಷದ ಅಪ್ರಾಪ್ತನನ್ನ ಮುಂಬೈ ಸೈಬರ್​ ಕ್ರೈಂ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪ್ರಾಪ್ತ ವಿದ್ಯಾರ್ಥಿ ಓದಿನಲ್ಲಿ ಚಾಣಾಕ್ಷನಾಗಿದ್ದು ಸದ್ಯ ಚಾರ್ಟೆಡ್​ ಅಕೌಂಟೆನ್ಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.

ಕಾಫಿ ಶಾಪ್​ ನೀಡಿದ ದೂರನ್ನ ಆಧರಿಸಿ ಸೆಪ್ಟೆಂಬರ್​​ 28ರಂದು ಐಪಿಸಿ ಹಾಗೂ ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ತಾಂತ್ರಿಕ ಮಾಹಿತಿ ಹಾಗೂ ಸಿಸಿ ಟಿವಿ ದೃಶ್ಯ ಅಪ್ರಾಪ್ತನ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು. ಯುಟ್ಯೂಬ್​ ವಿಡಿಯೋಗಳಿಂದ ಪ್ರೇರಣೆ ಪಡೆದ ಸ್ನೇಹಿತರು ಮೋಜಿಗಾಗಿ ಈ ಕೆಲಸ ಮಾಡಿದ್ದಾರೆ ಅಂತಾ ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ಈ ತಪ್ಪನ್ನ ಮಾಡಿದ ಅಪ್ರಾಪ್ತನನ್ನ ಬಾಲಾಪರಾಧಿ ಮಂಡಳಿಯ ಮುಂದೆ ಹಾಜರುಪಡಿಸಲಾಯ್ತು ಹಾಗೂ ಆತನ ಉತ್ತಮ ನಡವಳಿಕೆ ಹಿನ್ನೆಲೆ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಆದರೆ 2 ವರ್ಷಗಳ ಅವಧಿಗೆ ಎನ್​ಜಿಓ ಒಂದರಿಂದ ಕೌನ್ಸೆಲಿಂಗ್​ ಪಡೆಯುವಂತೆ ಕೇಳಿದ್ದೇವೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...