ಕಾಫಿ ಶಾಪ್ನ ಕಂಪ್ಯೂಟರ್ನ್ನು ಹ್ಯಾಕ್ ಮಾಡಿ ಕಾಫಿ ಶಾಪ್ ಬ್ಯಾಂಕ್ ಖಾತೆಯಿಂದ ಮೋಜಿಗಾಗಿ ಸ್ನೇಹಿತನ ಗಿಫ್ಟ್ ಕಾರ್ಡ್ಗೆ ಹಣ ವರ್ಗಾವಣೆ ಮಾಡಿದ 17 ವರ್ಷದ ಅಪ್ರಾಪ್ತನನ್ನ ಮುಂಬೈ ಸೈಬರ್ ಕ್ರೈಂ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿ ಓದಿನಲ್ಲಿ ಚಾಣಾಕ್ಷನಾಗಿದ್ದು ಸದ್ಯ ಚಾರ್ಟೆಡ್ ಅಕೌಂಟೆನ್ಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಕಾಫಿ ಶಾಪ್ ನೀಡಿದ ದೂರನ್ನ ಆಧರಿಸಿ ಸೆಪ್ಟೆಂಬರ್ 28ರಂದು ಐಪಿಸಿ ಹಾಗೂ ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ತಾಂತ್ರಿಕ ಮಾಹಿತಿ ಹಾಗೂ ಸಿಸಿ ಟಿವಿ ದೃಶ್ಯ ಅಪ್ರಾಪ್ತನ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು. ಯುಟ್ಯೂಬ್ ವಿಡಿಯೋಗಳಿಂದ ಪ್ರೇರಣೆ ಪಡೆದ ಸ್ನೇಹಿತರು ಮೋಜಿಗಾಗಿ ಈ ಕೆಲಸ ಮಾಡಿದ್ದಾರೆ ಅಂತಾ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ತಪ್ಪನ್ನ ಮಾಡಿದ ಅಪ್ರಾಪ್ತನನ್ನ ಬಾಲಾಪರಾಧಿ ಮಂಡಳಿಯ ಮುಂದೆ ಹಾಜರುಪಡಿಸಲಾಯ್ತು ಹಾಗೂ ಆತನ ಉತ್ತಮ ನಡವಳಿಕೆ ಹಿನ್ನೆಲೆ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಆದರೆ 2 ವರ್ಷಗಳ ಅವಧಿಗೆ ಎನ್ಜಿಓ ಒಂದರಿಂದ ಕೌನ್ಸೆಲಿಂಗ್ ಪಡೆಯುವಂತೆ ಕೇಳಿದ್ದೇವೆ ಅಂತಾ ಹೇಳಿದ್ರು.