ಸಾರ್ವಜನಿಕರಲ್ಲಿ ಸಾಮೂಹಿಕ ಹೊಣೆಗಾರಿಕೆಯ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟವಾದ ಪ್ರಯತ್ನಗಳ ಮೂಲಕ ಹೆಸರು ಮಾಡಿರುವ ಮುಂಬೈ ಪೊಲೀಸರು ಇದೀಗ ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಜನರಲ್ಲಿ ಮಾಸ್ಕ್ ಧರಿಸುವ ಅಗತ್ಯವನ್ನು ತಿಳಿಸಲು ಕ್ರಿಯೇಟಿವ್ ಮಾರ್ಗವೊಂದನ್ನು ಆಯ್ದುಕೊಂಡಿದ್ದಾರೆ.
ಈ ಕೆಲಸಕ್ಕೆ ಡಿಸ್ನಿಯ ಸಿಂಡ್ರೆಲಾಳನ್ನು ಆಯ್ದುಕೊಂಡಿರುವ ಮುಂಬೈ ಪೊಲೀಸರು, ನೃತ್ಯ ಕಾರ್ಯಕ್ರಮವೊಂದು ಮುಗಿದ ಬಳಿಕ ಸಿಂಡ್ರೆಲಾ ಅಕಸ್ಮಾತ್ ಆಗಿ ತನ್ನ ಶೂ ಅನ್ನು ಕಳೆದುಕೊಂಡ ದೃಶ್ಯವನ್ನು ಆಧಾರವಾಗಿಟ್ಟುಕೊಂಡು ಕ್ರಿಯೇಟಿವ್ ಕಂಟೆಂಟ್ ಒಂದನ್ನು ಮಾಡಿದ್ದಾರೆ.
ಸಾವಿರ ಕಂಬದ ಬಸದಿ ವಿಶೇಷತೆ ಇಲ್ಲಿದೆ ನೋಡಿ
ಈ ಸೀನ್‌ಗೆ ಟ್ವಿಸ್ಟ್ ಕೊಟ್ಟುಕೊಂಡಿರುವ ಮುಂಬೈ ಪೊಲೀಸರು, ’ಶೂ ಬಿಡುವುದು ಓಕೆ, ಆದರೆ ಮಾಸ್ಕ್ ಮರೆಯುವುದು ಪಾಪ’ ಎಂಬ ಕ್ಯಾಪ್ಷನ್ ಕೊಟ್ಟು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
https://www.instagram.com/p/CNrDNJKFucF/?utm_source=ig_web_copy_link
https://www.instagram.com/p/CNgtRyEFgKe/?utm_source=ig_web_copy_link
https://www.instagram.com/p/CNeVir1FSFQ/?utm_source=ig_web_copy_link