alex Certify ಮಾಸ್ಕ್​ ಇಲ್ಲದೆ ತಿರುಗಾಡ್ತಿದ್ದವರಿಗೆ ಪೊಲೀಸರಿಂದ ವಿಚಿತ್ರ ಶಿಕ್ಷೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​ ಇಲ್ಲದೆ ತಿರುಗಾಡ್ತಿದ್ದವರಿಗೆ ಪೊಲೀಸರಿಂದ ವಿಚಿತ್ರ ಶಿಕ್ಷೆ…..!

ಚಿಕ್ಕ ವಯಸ್ಸಿನಲ್ಲಿ ತರಗತಿಗಳಲ್ಲಿ ಮಕ್ಕಳಿಗೆ ಏನಾದರೂ ತಪ್ಪು ಮಾಡಿದ್ರೆ ಶಿಕ್ಷಕರು ಕೋಳಿ ನಡಿಗೆಯ ಶಿಕ್ಷೆ ನೀಡಿದ್ರು. ಕುಳಿತುಕೊಂಡ ಭಂಗಿಯಲ್ಲಿ ಕಾಲಿನ ಸಹಾಯದಿಂದ ನಡೆಯುವ ಈ ಶಿಕ್ಷೆ ಯಮಯಾತನೆ ನೀಡ್ತಿದ್ದಂತೂ ಸುಳ್ಳಲ್ಲ. ಇದೀಗ ಕೊರೊನಾ ಮಾರ್ಗಸೂಚಿಗಳನ್ನ ಮುರಿಯುವ ದುಷ್ಕರ್ಮಿಗಳಿಗೆ ಮುಂಬೈ ಪೊಲೀಸರು ಇದೇ ಶಿಕ್ಷೆಯನ್ನ ನೀಡ್ತಿದ್ದಾರೆ.

ದಕ್ಷಿಣ ಮುಂಬೈನ ಮರೈನ್​ ಡ್ರೈವ್​ಗೆ ಮಾಸ್ಕ್​ ಇಲ್ಲದೇ ಪ್ರವೇಶಿಸಲೆತ್ನಿಸಿದ ಐವರಿಗೆ ಪೊಲೀಸರು ಈ ಶಿಕ್ಷೆಯನ್ನ ನೀಡಿದ್ದಾರೆ. ಸೋಮವಾರ ಮಧ್ಯಾಹ್ನ ಈ ಸಮುದ್ರದ ದಡದಲ್ಲೇ ಪೊಲೀಸರು ಈ ಶಿಕ್ಷೆ ನೀಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಮಾಸ್ಕ್​ ಇಲ್ಲದೇ ಮರೈನ್​ ಡ್ರೈವ್​ಗೆ ಎಂಟ್ರಿ ನೀಡಿದ ಐವರಿಗೆ ಪೊಲೀಸರು ಕೋಳಿ ನಡಿಗೆ ಶಿಕ್ಷೆ ನೀಡಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಇನ್ನು ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸ್​ ಇಲಾಖೆ, ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಶೀಘ್ರದಲ್ಲೇ ಹೆಚ್ಚಿನ ಕಾನೂನು ಕ್ರಮಕೈಗೊಳ್ಳಲಾಗುತ್ತೆ ಎಂದು ಹೇಳಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...