alex Certify ಹೊಳೆಯುವ ಅಲೆ ಕಂಡು ಮಾಯಾನಗರಿ ಜನತೆಗೆ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯುವ ಅಲೆ ಕಂಡು ಮಾಯಾನಗರಿ ಜನತೆಗೆ ಅಚ್ಚರಿ

ಎಂದಿನಂತೆ ಸಂಜೆಯ ವಾಯುವಿಹಾರಕ್ಕೆಂದು ಮುಂಬಯಿಯ ಜೂಹೂ ಬೀಚ್‌ನತ್ತ ಬಂದಿದ್ದ ಮಾಯಾನಗರಿಯ ನಿವಾಸಿಗಳಿಗೆ ಅಚ್ಚರಿ ಮೂಡಿಸುವ ದೃಶ್ಯಾವಳಿಯೊಂದು ಕಣ್ಣಿಗೆ ಬಿದ್ದಿದೆ.

ನೀಲಿ ಬಣ್ಣದ ಬೆಳಕನ್ನು ಬೀರುವ ಅಲೆಯೊಂದು ಸಂಜೆಯ ಕತ್ತಲಲ್ಲಿ ಮಿಂಚುತ್ತಿರುವ ಪ್ರಕೃತಿಯ ಈ ದೃಶ್ಯಕಾವ್ಯವನ್ನು ಕಣ್ಣಿಗೆ ತುಂಬಿಕೊಂಡಿದ್ದಾರೆ ವೀಕ್ಷಕರು. ಬಯೋಲುಮಿನಿಸೆನ್ಸ್‌ ಎಂದು ಈ ಪ್ರಕ್ರಿಯೆಯನ್ನು ಕರೆಯಲಾಗುತ್ತದೆ.

ಜಗತ್ತಿನ ಅನೇಕ ಕಡಲ ತೀರಗಳಲ್ಲಿ ಈ ಬಯೋಲುಮಿನಿಸೆನ್ಸ್‌ ಪ್ರಕ್ರಿಯೆಯನ್ನು ನೋಡಬಹುದಾಗಿದೆ. ಇಂಡೋನೇಷ್ಯಾ, ಅಮೆರಿಕ, ವಿಯೆಟ್ನಾಂ, ಆಸ್ಟ್ರೇಲಿಯಾ, ಮಾಲ್ಡೀವ್ಸ್‌ ಸೇರಿದಂತೆ ಅನೇಕ ದೇಶಗಳಲ್ಲಿ ಈ ಕ್ರಿಯೆಯನ್ನು ಕಾಣಬಹುದಾಗಿದೆ.

ನಾಕ್ಟಿಲುಕಾ ಸಿಂಟಿಲನ್ಸ್‌ ಹೆಸರಿನ ಪ್ಲಾಂಕ್ಟನ್‌ ಈ ದೃಶ್ಯಕಾವ್ಯಕ್ಕೆ ಕಾರಣವಾಗಿದೆ. ಈ ಪ್ಲಾಂಕ್ಟನ್ ‌ಅನ್ನು ಸೀ ಸ್ಪಾರ್ಕಲ್ ಎಂದೂ ಸಹ ಕರೆಯಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...