alex Certify ತಾಯಿ ಪ್ರೀತಿಯನ್ನು ತೋರಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಪ್ರೀತಿಯನ್ನು ತೋರಿಸುತ್ತೆ ಈ ವಿಡಿಯೋ

ತಾಯಿಗಿಂತ ಬೇರೆ ದೇವರಿಲ್ಲ ಎನ್ನಲಾಗುತ್ತದೆ.‌ ತನ್ನ ರಕ್ತ ಬಸಿದು ಹುಟ್ಟಿಸಿದ ತಾಯಿ ಮಕ್ಕಳ ರಕ್ಷಣೆಗಾಗಿ ಪ್ರಾಣ ನೀಡಲೂ ಸಿದ್ಧಳಿರುತ್ತಾಳೆ.‌

ತಾಯಿಯ ಕಾಳಜಿ, ಪ್ರೇಮ, ಕರುಣೆ, ತ್ಯಾಗ ಕೇವಲ ಮಾನವರಲ್ಲಿ ಮಾತ್ರವಲ್ಲ. ಪ್ರಾಣಿಗಳಲ್ಲೂ ಕೊಂಚ ಹೆಚ್ಚೇ ಇರುತ್ತದೆ. ಮಂಗವೊಂದು ತನ್ನ ಪ್ರಾಣ ಲೆಕ್ಕಿಸದೇ ಬಾವಿಯಿಂದ ತನ್ನ ಮರಿಯನ್ನು ರಕ್ಷಿಸಿದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.‌

ಭಾರತೀಯ ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟರ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. “ಪ್ರೀತಿ ತಾಯಿಯನ್ನು ಉತ್ತಮ ಜೀವ ರಕ್ಷಕ ಕಮಾಂಡೊವನ್ನಾಗಿ ಮಾಡುತ್ತದೆ” ಎಂದು ಕ್ಯಾಪ್ಶನ್ ನೀಡಿದ್ದಾರೆ.‌

ಮಂಗದ ಮರಿ ಬಾವಿಯಲ್ಲಿ ಬಿದ್ದು ಮೇಲೆ ಬರಲಾಗದೇ ಆತಂಕಿತವಾಗಿರುತ್ತದೆ. ಕೆಲವೇ ಕ್ಷಣದಲ್ಲಿ ಅಲ್ಲಿಗೆ ಬಂದ ಮರಿಯ ತಾಯಿ‌ ಮಂಗ ಹಿಂದಿನ ಎರಡು ಕಾಲುಗಳನ್ನು ದಡಕ್ಕೆ ಸಿಕ್ಕಿಸಿಕೊಂಡು ಬಾವಿಯೊಳಗೆ ಬಾಗಿ ತನ್ನ ಮರಿಯನ್ನು ಎಳೆಯುತ್ತದೆ. ಕೊನೆಗೂ ತನ್ನ ಮರಿಯನ್ನು ಮೇಲೆ ಹಾಕುವಲ್ಲಿ ಯಶಸ್ವಿಯಾಗುತ್ತದೆ. ಮೇಲೆ ಬಂದ ನಂತರ ಅದನ್ನು ಅಪ್ಪಿ, ಮುದ್ದಿಸಿ, ಸಂಭ್ರಮಿಸುತ್ತದೆ. “ತಾಯಿಯ ಎದೆಯಲ್ಲಿ ದೇವರು ಸ್ವಾರ್ಥವಿಲ್ಲದ ಪ್ರೀತಿಯನ್ನು ತುಂಬಿದ್ದಾನೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...