alex Certify ಈ ದೇವಸ್ಥಾನದಲ್ಲಿ ನಡೆಯುತ್ತೆ ಕೋತಿಗಳಿಗೆ ಪೂಜೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇವಸ್ಥಾನದಲ್ಲಿ ನಡೆಯುತ್ತೆ ಕೋತಿಗಳಿಗೆ ಪೂಜೆ….!

ಇಲ್ಲಿಯವರೆಗೆ ನೀವು ದೇವಾಲಯಗಳಲ್ಲಿ ವಿವಿಧ ದೇವರನ್ನ ಪೂಜೆ ಮಾಡೋದನ್ನ ನೋಡಿರ್ತೀರಾ. ಆದರೆ ಯಾವ ದೇವಾಲಯದಲ್ಲಾದರೂ ಮನುಷ್ಯರನ್ನ ಪ್ರಾಣಿಗಳನ್ನ ಪೂಜೆ ಮಾಡೋದನ್ನ ಕಂಡಿದ್ದೀರಾ..? ಇಲ್ಲ ಅನ್ನೋದು ನಿಮ್ಮ ಉತ್ತರವಾದ್ರೆ ನೀವು ಈ ಸ್ಟೋರಿಯನ್ನ ಓದಲೇಬೇಕು.

ರಾಜಸ್ಥಾನದ ಜೋಧಪುರದ ಭೋಪಾಲಗಢದಲ್ಲಿರುವ ಮಂದಿರದಲ್ಲಿ ಜನರು ಕೋತಿಗಳನ್ನ ಪೂಜೆ ಮಾಡಬೇಕು ಅಂತಾನೇ ಭಕ್ತ ಸಾಗರವೇ ನೆರೆಯುತ್ತದೆ. ಕೋತಿಗಳ ಜೊತೆಯಲ್ಲಿ ಇಲ್ಲಿ ಬಾಲಾಜಿಯ ಮೂರ್ತಿ ಕೂಡ ಪ್ರತಿಷ್ಠಾಪನೆ ಮಾಡಲಾಗಿದ್ದು ಇದರ ಪೂಜೆಯೂ ನಡೆಯುತ್ತದೆ. ಈ ಬಾಲಾಜಿಯನ್ನ ಕರೆಂಟ್ ಬಾಲಾಜಿ ಎಂದು ಕರೆಯಲಾಗುತ್ತೆ. 23 ವರ್ಷಗಳ ಹಿಂದೆ ಇಲ್ಲಿ ಕರೆಂಟ್​​​ ಶಾಕ್​ನಿಂದಾಗಿ ಕೋತಿಯೊಂದು ಸಾವನ್ನಪ್ಪಿತ್ತು. ಕೋತಿಯ ಸಾವಿನಿಂದ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ದುಃಖಿತರಾಗಿದ್ದರು. ಅವರೆಲ್ಲ ಸೇರಿ ಇದೇ ಜಾಗದಲ್ಲಿ ಕೋತಿಯ ಸಮಾಧಿ ಮಾಡಿದ್ದರು.

1998ರಲ್ಲಿ ವಿದ್ಯುತ್​ ಕೆಲಸ ಮಾಡುತ್ತಿದ್ದ ವೇಳೆ ಕೋತಿ ಸಾವನ್ನಪ್ಪಿತ್ತು. ಹೀಗಾಗಿ ಇದೇ ಜಾಗದಲ್ಲಿ ಕೋತಿಯ ಸಮಾಧಿ ನಿರ್ಮಿಸಿದ ಬಳಿಕ ಸಾರ್ವಜನಿಕರ ಬಳಿ ಚಂದಾ ಸಂಗ್ರಹ ಮಾಡಿ ದೇಗುಲವನ್ನ ನಿರ್ಮಿಸಲಾಗಿದೆ. ಇಲ್ಲಿ ಪ್ರತಿ ವರ್ಷವೂ ದೇಗುಲ ವರ್ಷಾಚರಣೆ ಮಾಡಲಾಗುತ್ತೆ. ಈ ದಿನದಂದು ಬಾಲಾಜಿ ಮೂರ್ತಿಯ ಜೊತೆಗೆ ಕೋತಿಗಳ ಪೂಜೆಯನ್ನೂ ನೆರವೇರಿಸಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...