ತರಗತಿಯಲ್ಲಿ ನಿದ್ರಿಸುವ ವೇಳೆ ಆಳ ತೂಕಡಿಸಿ ದಿಢೀರ್ ಅಂತ ಎದ್ದಿರುವ ನೆನಪು ನಿಮಗೆ ಇದೆಯೇ? ಇದೇ ಅನುಭವವನ್ನು ನೆನಪಿಸುವ ಘಟನೆಯೊಂದರಲ್ಲಿ ಕೋತಿಯೊಂದು ತೂಕಡಿಸುವ ವಿಡಿಯೋ ವೈರಲ್ ಆಗಿದೆ.
ಕೋತಿಯೊಂದು ಹಾಗೇ ಸಣ್ಣದೊಂದು ನಿದ್ರೆ ಮಾಡುತ್ತಾ, ಇದ್ದಕ್ಕಿದ್ದಂತೆ ಕಣ್ಣು ತೆರೆಯುವ ದೃಶ್ಯಾವಳಿಯನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಧಾ ರಾಮೆನ್, ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ನೀವೂ ಸಹ ಇದೇ ರೀತಿ ಮಾಡಿದ್ದು ನೆನಪಿದ್ದರೆ, ರೀಟ್ವೀಟ್ ಮಾಡಿ. ಕೊನೆಯವರೆಗೂ ಪೂರ್ತಿ ಸ್ಕ್ರೀನ್ನಲ್ಲಿ ನೋಡಿ” ಎಂದು ರಾಮೆನ್ ಇದೇ ವೇಳೆ ತಿಳಿಸಿದ್ದಾರೆ.
https://twitter.com/vrg102019/status/1291028842828587013?ref_src=twsrc%5Etfw%7Ctwcamp%5Etweetembed%7Ctwterm%5E1291028842828587013%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fmonkey-takes-power-nap-while-sitting-under-tree-netizens-relate-with-viral-video-watch%2F633026