alex Certify 251 ರೂ.ಗೆ ಸ್ಮಾರ್ಟ್ ಫೋನ್​ ಕುಖ್ಯಾತಿಯ ಉದ್ಯಮಿ ಮೋಹಿತ್​ ಗೋಯಲ್​ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

251 ರೂ.ಗೆ ಸ್ಮಾರ್ಟ್ ಫೋನ್​ ಕುಖ್ಯಾತಿಯ ಉದ್ಯಮಿ ಮೋಹಿತ್​ ಗೋಯಲ್​ ಅರೆಸ್ಟ್

Freedom 251: Rs 16 lakh payment lands Mohit Goel of Ringing Bells in custody - noida - Hindustan Timesಫ್ರೀಡಂ 251 ಎಂಬ ಹೆಸರಿನ ಸ್ಮಾರ್ಟ್ ಫೋನ್​ ಸ್ಕೀಮ್​ ವಂಚನೆ ನಿಮಗೆ ನೆನಪಿದ್ದಿರಬಹುದು. ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್​ಗಳನ್ನ ಘೋಷಿಸಿ 2017ರಲ್ಲಿ ಭಾರೀ ಸುದ್ದಿ ಮಾಡಿದ್ದ ನೋಯ್ಡಾ ಮೂಲದ ಉದ್ಯಮಿ ಇದೀಗ ಮತ್ತೊಂದು ವಂಚನೆ ಆರೋಪವನ್ನ ಎದುರಿಸುತ್ತಿದ್ದಾರೆ.

ಡ್ರೈ ಫ್ರೂಟ್ಸ್ ಸರಬರಾಜುದಾರರಿಗೆ ಮೋಸ ಮಾಡುವ ಮೂಲಕ ದೇಶಾದ್ಯಂತ ಸಾವಿರಾರು ಜನರಿಂದ ಶತಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂಬ ಆರೋಪದಡಿಯಲ್ಲಿ ಗ್ರಾಹಕ ಸರಕು ಆಮದು – ರಫ್ತು ಕಂಪನಿಯ ಇಬ್ಬರು ಅಧಿಕಾರಿಗಳನ್ನ ನೋಯ್ಡಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇದರಲ್ಲಿ ಒಬ್ಬ ರಿಂಗಿಂಗ್​ ಬೆಲ್ಸ್​ ಕಂಪನಿ ಮಾಲೀಕ ಮೋಹಿತ್​ ಗೋಯಲ್​.

ಐದು ಜನರೊಂದಿಗೆ ಸೇರಿ ದುಬೈ ಡ್ರೈ ಫ್ರೂಟ್ಸ್ ಹಾಗೂ ಸ್ಪೈಸಸ್​ ಹಬ್​ ಎಂಬ ಕಂಪನಿ ನಡೆಸುತ್ತಿದ್ದ ಗೋಯೆಲ್​ರನ್ನ ಭಾನುವಾರ ಸಂಜೆ ಸೆಕ್ಟರ್​ 51ರ ಮೇಘದೂತಂ ಪಾರ್ಕ್​ ಬಳಿ ಬಂಧಿಸಲಾಯ್ತು. ಸೆಕ್ಟರ್​ 62ರ ಪ್ರದಾನ ಕಚೇರಿ ಸಂಕೀರ್ಣವಾದ ಕೊರೆಂಥಮ್​ ಕಂಪನಿ ವಂಚನೆ ಬಗ್ಗೆ ಪಂಜಾಬ್, ಹರಿಯಾಣ, ಯುಪಿ, ಪಶ್ಚಿಮ ಬಂಗಾಳ, ರಾಜಸ್ಥಾನ, ದೆಹಲಿ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಇನ್ನೂ ಕೆಲವು ರಾಜ್ಯಗಳಲ್ಲಿ ವ್ಯಾಪಾರಿಗಳಿಂದ ಕನಿಷ್ಠ 40 ಲಿಖಿತ ದೂರುಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...