alex Certify ಕುತೂಹಲ ಮೂಡಿಸಿದೆ ಮೋದಿ ನಡೆ: ಒಂದು ವಾರ ಮೊದಲೇ ಸಭೆ ಕರೆದ ಪ್ರಧಾನಿ, ಲಾಕ್ ಡೌನ್ ಮುಂದುವರಿಕೆ ಭವಿಷ್ಯ ಇವತ್ತೇ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲ ಮೂಡಿಸಿದೆ ಮೋದಿ ನಡೆ: ಒಂದು ವಾರ ಮೊದಲೇ ಸಭೆ ಕರೆದ ಪ್ರಧಾನಿ, ಲಾಕ್ ಡೌನ್ ಮುಂದುವರಿಕೆ ಭವಿಷ್ಯ ಇವತ್ತೇ ನಿರ್ಧಾರ

ನವದೆಹಲಿ: ಒಂದು ವಾರ ಮೊದಲೇ ಮುಖ್ಯಮಂತ್ರಿಗಳ ಸಭೆ ಕರೆದ ಪ್ರಧಾನಿ ಮೋದಿ ಇವತ್ತೇ ಲಾಕ್ ಡೌನ್ ಭವಿಷ್ಯದ ಕುರಿತಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದು, ಮೇ 17ರಿಂದ ಲಾಕ್ಡೌನ್ ಮುಂದುವರೆಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಮತ್ತಷ್ಟು ದಿನ ಲಾಕ್ಡೌನ್ ಮುಂದುವರೆಯಲಿದ್ದು, ಲಾಕ್ ಡೌನ್ ನಿರ್ಬಂಧಗಳು ಮತ್ತಷ್ಟು ಕಠಿಣವಾಗಬಹುದು. ಇನ್ನೂ ಕೆಲವು ದಿನ ಲಾಕ್ ಡೌನ್ ಮುಂದುವರೆಸಲು ಪ್ರಧಾನಿ ಮೋದಿ ಚಿಂತಿಸಿದ್ದಾರೆ ಎನ್ನಲಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆ ಕುತೂಹಲ ಮೂಡಿಸಿದೆ.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಮೇ 17 ಕ್ಕೆ ಲಾಕ್ಡೌನ್ ಅಂತ್ಯವಾಗುತ್ತದೆ. ನಂತರದಲ್ಲಿ ಲಾಕ್ ಡೌನ್ ಮುಂದುವರೆಸಬೇಕೆ? ಬೇಡವೇ ಎಂಬುದರ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದಾರೆ. ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಮುಂದುವರೆಸಲು ತೀರ್ಮಾನಿಸಿದ್ದು, ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಕೆಲವು ದಿನ ಲಾಕ್ ಡೌನ್ ಮುಂದುವರೆಸುವಂತೆ ಪ್ರಧಾನಿಗೆ ಮನವಿ ಮಾಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...