alex Certify ಲಾಕ್ ಡೌನ್ ಮುಂದುವರೆಯುತ್ತಾ…? ಇಲ್ವಾ…? ರೆಡಿಯಾಯ್ತು ಮೋದಿ ಸೂತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಮುಂದುವರೆಯುತ್ತಾ…? ಇಲ್ವಾ…? ರೆಡಿಯಾಯ್ತು ಮೋದಿ ಸೂತ್ರ

ನವದೆಹಲಿ: ಜಾರಿಯಲ್ಲಿರುವ ಲಾಕ್ ಡೌನ್ ಮೇ 17 ಕ್ಕೆ ಮುಕ್ತಾಯವಾಗಲಿದ್ದು, ಕೇಂದ್ರದಿಂದ ಮತ್ತೆ ಹೊಸ ಮಾರ್ಗಸೂಚಿ ಹೊರಡಿಸಲಾಗುತ್ತದೆ. ಮೇ 17 ರ ನಂತರ ಯಾವ ಚಟುವಟಿಕೆ ನಿಷೇಧಿಸಬೇಕು ಮತ್ತು ಯಾವ ಚಟುವಟಿಕೆಯನ್ನು ನಿಷೇಧಿಸಬಾರದು ಎಂಬ ಕುರಿತಾಗಿ ಇಂದು ಪ್ರಧಾನಿ ಮೋದಿ ಚರ್ಚೆ ನಡೆಸಲಿದ್ದಾರೆ.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. 6 ಚಟುವಟಿಕೆ ಹೊರತುಪಡಿಸಿ ಎಲ್ಲಾ ಚಟುವಟಿಕೆ ನಡೆಸಲು ಅವಕಾಶ ನೀಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಸಾರ್ವಜನಿಕ ಸಭೆ, ಸಮಾರಂಭ, ಶಾಲಾ –ಕಾಲೇಜು, ವಾರದ ಸಂತೆ ಸೇರಿ ಕೆಲವೊಂದು ಚಟುವಟಿಕೆಗೆ ನಿರ್ಬಂಧ ಹೇರಲಾಗುವುದು. ಈಗಾಗಲೇ ಕೇಂದ್ರದಿಂದ ಎರಡು ಸಲ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಆದರೆ ಎರಡು ಮಾರ್ಗಸೂಚಿ ಗಳಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದು ಕೇಂದ್ರ ಸರ್ಕಾರದ ಚಿಂತೆಗೆ ಕಾರಣವಾಗಿದೆ. ಇದನ್ನು ಬಗೆಹರಿಸಲು ಹೊಸ ಮಾರ್ಗಸೂಚಿ ಹೊರಡಿಸಬೇಕಿದೆ.

ಆರೋಗ್ಯ, ಗೃಹ, ಹಣಕಾಸು ಇಲಾಖೆಯ ಪ್ರಸ್ತಾಪಗಳನ್ನು ಪರಿಶೀಲಿಸಲಾಗುವುದು. ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಚರ್ಚೆ ನಡೆಸಿ ಮೇ 15ಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...